ನೋಡ್ತಿರೋರು

ಶುಕ್ರವಾರ, ಜೂನ್ 26, 2009

ನಂಬಿಕೆ Vs ಮೂಢನಂಬಿಕೆ - ಸೂರ್ಯಗ್ರಹಣ

ಇದೇ ತಿಂಗಳ ೨೬ನೇ ಜನವರಿ ೨೦೦೯ ನಮ್ಮ ದೇಶದಲ್ಲೆಲ್ಲರೂ ಗಣರಾಜ್ಯೋತ್ಸವವನ್ನು ಆಚರಿಸುತ್ತಾರೆ, ಆದರೆ ಬಾನಿನಲ್ಲಿ ಸೂರ್ಯಗ್ರಹಣ ಅದೇ ದಿನ ಬೆಳಿಗ್ಗೆ ಬಹುಶಃ ೭.೦೭ ನಿಮಿಶದಿಂದ ೯.೪೬ ನಿಮಿಶದವರೆಗೆ ಇರುತ್ತದೆ ಎಂದು ನಾಸಾ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಗ್ರಹಣ ಆಗುವುದರ ಬಗ್ಗೆ ಅಥವಾ ಅದು ಗಣರಾಜ್ಯೋತ್ಸವದಂದೇ ಬೆಳ್ಳಂ ಬೆಳಿಗ್ಗೆ ಬರುವ ಬಗ್ಗೆ ಮಾತಲ್ಲಾ, ಆಸ್ತಿಕವಾದದ ಪ್ರಕಾರ ಸೂರ್ಯಗ್ರಹಣದಲ್ಲಿ ನಮ್ಮ ಹಿಂದೂಗಳ ಜನ್ಮರಾಶಿಗಳಾದ ವೃಶಭ, ಸಿಂಹ,ಮಿಥುನ,ಮೇಷ, ಕರ್ಕ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆಂದು ಎಲ್ಲಾ ಬೀದಿಗಳ ದೇವಸ್ಥಾನಗಳು ಶಾಂತಿಹೋಮ, ಯಾಗ ಮುಂತಾದ ರೆವಿನ್ಯೂ ಕಾರ್ಯಕ್ರಮಗಳ ಪಟ್ಟಿಯನ್ನೇ ಸಿದ್ದಪಡಿಸಿಟ್ಟಿರುವನ್ನು ಕಾಣಬಹುದು, ಆಕಾಶಕಾಯಗಳಲ್ಲಿ ನಡೆಯುವ ಪ್ರಕ್ರಿಯೆಗಳು ಮಾನವನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆ, ಅಲ್ಲವೇ ? ಅದರಲ್ಲೂ ಮೇಲೆ ಹೇಳುವ ೫ ರಾಶಿಗಳಲ್ಲಿ ಕೋಟ್ಯಾಂತರ ಜನ (ಜ್ಯೋತಿಷ್ಯದ ಪ್ರಕಾರ) ಇರಬಹುದು. ಹಾಗೆ ಪ್ರತಿ ಪ್ರದೇಶದಲ್ಲಿ (೧ ಕಿ.ಮೀ)ಇರುವ ದೇವಸ್ಥಾನಗಳ ಸರಾಸರಿ ಸಂಖ್ಯೆ ೫ ಎಂದು ತೆಗೆದುಕೊಂಡರು ಅದೇ ಪ್ರದೇಶದಲ್ಲಿ ಮೇಲಿನ ರಾಶಿಯ ಜನರು ಸುಮಾರು ೫೦೦೦ ಜನ ಸಿಗಬಹುದು, ಪ್ರತಿ ಶಾಂತಿಹೋಮಕ್ಕೆ ಸರಾಸರಿ ೨೫೦ ರೂಪಾಯಿಯನ್ನು ತೆಗೆದುಕೊಂಡು ಲೆಕ್ಕ ಹಾಕಿದರೂ ಇಂಥ ಮತ್ತೊಂದು ದೇವಸ್ಥಾನವನ್ನು ಕಟ್ಟಲಡ್ಡಿಯಿಲ್ಲ.

ಇಲ್ಲಿ ಪ್ರಾಣಿ ಪಕ್ಷಿಗಳ ಮೇಲೆ ಆಗದ ಪರಿಣಾಮ ಮನುಷ್ಯನಿಗೆ ಮಾತ್ರವೇ ಹೇಗೆ ಸಾಧ್ಯ ? ಹಾಗೊಂದು ವೇಳೆ ನಮ್ಮ ಆಸ್ಥಿಕ ಮಹಾಶಯರು ಪ್ರಾಣಿ ಪಕ್ಷಿಗಳ ಮೇಲು ಅದರ ಪರಿಣಾಮ ಆಗುತ್ತದೆ ಎನ್ನುವುದಾದರೆ ಅವುಗಳ ಜನ್ಮ ಸಮಯದಲ್ಲಿ ಯಾವ ನಕ್ಷತ್ರ, ಯಾವ ರಾಶಿಯಲ್ಲಿ ಜನನವೆಂದು ದತ್ತಾಂಶವನ್ನೇನಾದರೂ ಇಟ್ಟಿದ್ದಾರೆನು ? ಹಾಗಿದ್ದೂ ಆಸ್ಥಿಕವಾದದ ಕೆಲವು ಪ್ರಶ್ನೆಗಳು ಅಸ್ಥಿತ್ವವನ್ನೇ ಉಳಿಸಿಕೊಳ್ಳದೆ ನೀಡುವ ನೆಪಗಳಿಗೆ ಯಾವ ಆಧಾರವಿದೆ. ಸೂರ್ಯಗ್ರಹಣದ ಪರಿಣಾಮ ಆ ಸಮಯದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗೆ ವಸ್ತುಗಳ ಮೇಲೆ ಅಥವಾ ಮನುಷ್ಯನ ಚರ್ಮದ ಮೇಲೆ ಉಂಟಾಗುವ ಚರ್ಮರೋಗಕ್ಕೆ ದಾರಿಯಾಗಬಹುದು ಅಷ್ಟೆ. ಹಾಗೇ ಉಂಟಾಗುವ ರಾಸಾಯನಿಕ ಪ್ರಕ್ರಿಯೆಯು ಆಸ್ಥಿಕವಾದದಲ್ಲೇ ಯೋಚಿಸುವುದಾದರೆ ಬರೇ ವೃಶಭ, ಸಿಂಹ,ಮಿಥುನ,ಮೇಷ, ಕರ್ಕ ರಾಶಿಗಳ ಮೇಲೆ ಮಾತ್ರವೇನು? ಅದರ ಅಫಘಾತ ಹುಡುಕಿಕೊಂಡು ಹೋಗಿ ಇದೇ ರಾಶಿಯಲ್ಲಿ ಹುಟ್ಟಿದ ಜನರಿಗೆ ಮಾತ್ರವೇ ಹೇಗೆ ?

ಒಂದು ಒಳಿತು ಕೆಡಕು ಎನ್ನುವುದೇ ಆದರೆ ಅದು ಎಲ್ಲರಿಗೂ ಪರಿಣಾಮವೇ ಅಲ್ಲವೇ ? ಉದಾ : ಒಂದು ಮನೆಯಲ್ಲಿ ನಡುರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಹತ್ತುಕೊಂಡಿರುತ್ತದೆ, ಆಗ ಅದರ ಮುನ್ಸೂಚನೆಯನ್ನು ಯಾರು ಮೊದಲು ಕಾಣುವರು ಅವರು ಇತರರನ್ನು ರಕ್ಷಿಸುತ್ತಾ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಅಲ್ಲವೇ ? ಆ ಬೆಂಕಿಯೂ ಸಹ ಇವರನ್ನೇ ಸುಡಬೇಕು ಎಂದು ಯಾವ ಈರ್ಷೆಯನ್ನು ಇರಿಸಿಕೊಳ್ಳದೆ ಇರುತ್ತದಲ್ಲವೇ ? ಇವುಗಳು ಆಕಸ್ಮಿಕ ಅಫಘಾತಕ್ಕೆ ಉದಾಹರಣೆಯಾದರೆ ಇನ್ನೂ ರಾಶಿ ಫಲಗಳ ಬಗ್ಗೆ ಯೋಚಿಸಿದಾಗ ಎಷ್ಟೊ ವಿಚಾರಗಳು ಹಾಸ್ಯಸ್ಪದವಾಗಿ ಕಾಣುತ್ತಿರುತ್ತವೆ,

ನೀವು ರಾಶಿಫಲವನ್ನು ನಂಬುವವರಾದರೆ ಇವತ್ತು ಯಾವುದೋ ಪತ್ರಿಕೆಯಲ್ಲಿ ನಿಮ್ಮ ರಾಶಿಯಲ್ಲಿ ಧನಲಾಭ, ಸಹೋದರರಿಂದ ಕೇಡು, ವೃತ್ತಿಯಲ್ಲಿ ಕಿರಿಕಿರಿ ಎಂಬುದನ್ನು ನಿಮ್ಮ ರಾಶಿಗ ಕೊಟ್ಟಿರುವ ಗ್ರಹಫಲವೆಂದುಕೊಳ್ಳಿ. ಅದೇ ದಿನ ಮತ್ಯಾವುದೋ ಪತ್ರಿಕೆಯನ್ನು ತೆಗೆದು ಅೇ ರಾಶಿಯ ಬಗ್ಗೆ ಕಣ್ಣಾಡಿಸಿದರೆ ಅಲ್ಲಿ ಗೃಹದಲ್ಲಿ ನೆಮ್ಮದಿ, ಕೋರ್ಟು ಕಛೇರಿ ಕೆಲಸದಲ್ಲಿ ಪ್ರಗತಿ, ಮಿತಮೀರಿದ ಖರ್ಜು ಎಂದಿರುತ್ತದೆ, ಸಾಮಾನ್ಯವಾಗಿ ನೀವುಗಳು ನಂಬುವ ಎಸ್. ಕೆ. ಜ್ಯೆನ್, ಶಂಕರ ನಾರಾಯಣ್, ಸೋಮಯಾಜಿಲು, ಅಥವಾ ಇನ್ಯಾವುದೇ ಜ್ಯೋತಿಷ್ಯ ಶಾಸ್ತ್ರ ಪರಿಣಿತರು ಇದೇ ರಾಶಿ ಕುಂಡಲಿಗಳನ್ನು ತಮ್ಮ ಅನುಭವಕ್ಕೆ, ಅಥವಾ ತಮ್ಮ ಜ್ನಾನಾನುಸಾರವಾಗಿ ಹೇಳಿದರೂ ಕೊನೆಗವರು ಹೇಳುವ ಕೆಟ್ಟ ಪರಿಣಾಮಗಳು ಆಗಬಹುದು ಎನ್ನುವುದರ ಜೊತೆಗೆ ಒಂದಿಷ್ಟು ಹೋಮ ಹವನಗಳನ್ನು ಮತ್ಯಾವುದೋ ಶಾಂತಿ, ಸಂಸ್ಕಾರವನ್ನೋ ತಿಳಿಸುತ್ತಾರೆ, ಹಾಗಿದ್ದರೂ ನಾವೇನಾದ್ರೂ ಪ್ರಶ್ನಿಸಿದರೆ ಅದಕ್ಕೆ ಜ್ಯೋತಿಷ್ಯ ಶಾಸ್ತ್ರವು ಒಂದು ವಿಜ್ಣಾನ, ಅದು ಗಣಿತ ಹಾಗೂ ವಿಜ್ಣಾನದ ತಳಹದಿಯನ್ನೇ ನಂಬಿರುತ್ತದೆ ಎನ್ನುವ ಸಿದ್ದ ಉತ್ತರ ಸಿಕ್ಕಿರುತ್ತದೆ, ಹಾಗಾದರೆ ಜ್ಯೋತಿಷ್ಯ ವಿಜ್ಣಾನ ಹಾಗೂ ಗಣಿತಗಳ ತಳಹದಿಯೆಂದು ನಂಬೋಣ. ಅದರಲ್ಲಿ ನಮ್ಮ ಊಹೆಗೆ ನಿಲುಕದ ಎಷ್ಟೂ ಅವಘಡಗಳು ಸಂಭವಿಸುತ್ತದೆ ಎಂದು ನಂಬೋಣ. ಹಾಗಾದರೆ ಜ್ಯೋತಿಷ್ಯ ಹಾಗೂ ಭವಿಷ್ಯಗಳು ಬೇರೆ ಬೇರೆ ಎಂದಾಯಿತು.

ಜ್ಯೋತಿಷ್ಯ ಹಾಗೂ ಭವಿಷ್ಯ ಬೇರೆ ಬೇರೆಯಾದರೆ ಭವಿಷ್ಯಕ್ಕೆ ಯಾವುದೇ ತಳಹದಿ ಇಲ್ಲ ಎನ್ನುವುದು ಖಚಿತ. ಇಲ್ಲಿ ಜ್ಯೋತಿಷ್ಯ ಎಂದರೆ ಎಲ್ಲರೂ ತಮ್ಮ ತಮ್ಮ ಜನ್ಮ ನಕ್ಷತ್ರಕ್ಕೆ ಬರುವ ಕಂಟಕಗಳನ್ನು ಮುನ್ಸೂಚಿಸುವದೇ ಜ್ಯೋತಿಷ್ಯ ಎಂಬ ತಪ್ಪು ಕಲ್ಪನೆಯನ್ನೇ ನಂಬಿದ್ದಾರೆ, ಅಲ್ಲವೇ ? ಎಲ್ಲರ ಭವಿಷ್ಯವೂ ಒಂದೇ ತೆರನಾದವು ಎಂದು ಯಾರಾದರೂ ಹೇಳುವ ಧ್ಯೆರ್ಯ ಮಾಡಿಯಾರೇನು ? ಸಾಧ್ಯವಿಲ್ಲ, ಹಾಗಾದರೆ ಎಲ್ಲಾ ರಾಶಿಗಳಿಗೂ ಸೂರ್ಯಗ್ರಹಣವಾದರೆ ಏನು ಮಾಡಿಯಾರು ಹಾಗಾಗುವ ಸಂಧರ್ಬವೇನಾದರೂ ಇದ್ದೀಯೇನು ? ಮೇಲೆ ಹೇಳಿದಂತೆ ೨೬ರ ಜನವರಿಯಂದು ಕೇಡುಂಟಾಗುತ್ತದೆ ಎನ್ನುವ ಸ್ಲೋಗನ್ಗಳು ಬರೇ ಜನರು ಇಂಥ ಸಂಧರ್ಭಗಳ ಬಳಸಿಕೊಳ್ಳುವ ರೆವೆನ್ಯೂಗಳೆಂದೇ ಅರ್ಥ.

ಒಂದು ಕಾಲ ಒಬ್ಬ ಪ್ರಸಿದ್ದ ಪಂಚಾಂಗ ಕರ್ತೃ ಪಂಡಿತ ನಾಗರಾಜರವರು ( ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಪರಿಚಯವಿರಬಹುದು, ಸುಳ್ಯ ಸಮೀಪದವರು ಅವರ ಸವಿವರವನ್ನು ಮತ್ತೊಮ್ಮೆ ಬರೆಯುತ್ತೇನೆ) ಇಂದು ಏನು ಪ್ರತಿಪಾದಿಸುತ್ತಾರೆಂದು ಯಾರಾದರೂ ಕೇಳಿದರೆ ಎಂಥಹ ಜ್ಯೋತಿಷ್ಯ ಭವಿಷ್ಯವನ್ನು ಖಂಡ ತುಂಡವಾಗಿ ಹೀಗೆ ನಡೆಯುತ್ತದೆಂದು ಹೇಳುವವನು ಒಮ್ಮೆ ಮ್ಯೆಬೆವರು ಒರೆಸಿಕೊಳ್ಳುತ್ತಾನೆ. ಅವರ ಸವಾಲಿಗೆ ೧೫ ವರ್ಷಗಳಿಂದಲೂ ಯಾವೊಬ್ಬ ಭವಿಷ್ಯಗಾರನು ಇದುವರೆಗೂ ೧೦ರಲ್ಲಿ ಏಳಕ್ಕೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಫಲ ಜ್ಯೋತಿಷ್ಯ ಶುಧ್ದ ಸುಳ್ಳು, ಅದನ್ನು ನಂಬಿಕೊಂಡು ಯಾವುದಾದರೂ ಕೆಲಸಕ್ಕೆ ಕ್ಯೆಹಾಕೀರಾ ಜೋಕೆ. ಇನ್ನೂ ಸೂರ್ಯಗ್ರಹಣದಲ್ಲಿ ರಾಶಿಗಳ ಮೇಲೆ ಆಗುವ ಪರಿಣಾಮವಂತು ಶುದ್ದ ಮೂರ್ಖ ವಿಷಯಗಳು. ಹಾಗೇನಾದರೂ ಇದರಲ್ಲಿ ಮುಳುಗಿ ತೇಲುವ ಮನುಷ್ಯನಿಗೆ ಏನಾದರೂ ಹೇಳಲು ಹೋದರೆ ಅವನು ತನ್ನ ನೆಗೆಟಿವ್ಗಳನ್ನು ಒಪ್ಪಿಕೊಳ್ಳದೇ ಅದೇ ಭದ್ರಕೋಟೆಯಲ್ಲಿ ಇರಲು ಇಷ್ಟಪಡುತ್ತಾನೆಯೇ ಹೊರತು, ಹೊರಬಂದು ತನ್ನ ಅಸ್ತಿತ್ವ ನಿಜವಾಗಲೂ ಏನು ಎಂದು ಒಮ್ಮೆಯೂ ಯೋಚಿಸಲಾರ.

ಫಲ ಜ್ಯೋತಿಷ್ಯ ಹಾಗೂ ಸೂರ್ಯಗ್ರಹಣದಲ್ಲಿ ಆಗುವ ರಾಶಿದೋಷಗಳು ನಿಜವೆಂದು ಹೇಳುವವರು ಆಧಾರ ಸಹಿತ ನಿರೂಪಿಸಲಿ ಹಾಗೂ ಸಾಧ್ಯವಾದರೆ ಇದೇ ವಿಚಾರವಾಗಿ ನಾ ಅವರ ಜೊತೆ ಎದುರು ವಾದಕ್ಕೂ ಸಿದ್ದ

ನಿಮ್ಮ ಅಭಿಪ್ರಾಯಗಳು ಮೂಡಿಬರಲಿ

ಕಾಮೆಂಟ್‌ಗಳಿಲ್ಲ: