ನೋಡ್ತಿರೋರು

ಶುಕ್ರವಾರ, ಜೂನ್ 26, 2009

ನೆನಪಾಗುವವಳು

ನೆನಪಾಗುವಳ ಪದೇ ಪದೇ

ಅದೇ ಪದಗಳ ಮೆಲುಕು ಹಾಕುವಾಗ

ನಗೆಬೀರುತ ನನ್ನೆಡೆಗೆ

ಬರುವಾಗ, ನಾನಾಗಿದ್ದೆ

ಪ್ರಪಂಚವನ್ನೇ ಗೆದ್ದೆನೆಂಬ ಭಾಸದಲ್ಲಿಪ್ರೀತಿಯ ಮಧುರತೆಯ ಕಡಲಿನಲಿ

ಮುಳುಗಿ ನಲಿದಾಡಿದೆ,

ನಾಲ್ಕು ವರುಷಗಳ ಹೋರಾಟ ಸರಿಸಮ

ಯಾರಿಗೆ ಯಾರೆಂದು ?

ಅದೇ ಮೇ ೧೩ರ ೨೦೦೫ರಂದುವಿಪರ್ಯಾಸ..........,

ಇಂದಿಗೆ ವರುಷ ನನ್ನವಳ ತೊರೆದು ಹೋದ ನಿಮಿಷ

ಅದು ೧೧.೧೩ ಎ.ಎಂ. ಮೇ ೧೩ ೨೦೦೮ಸೋತು ಗೆದ್ದನೆಂಬ ಭಾವ ನನ್ನಲ್ಲಿ

ಪ್ರೀತಿಗೆ ಸೋತು ನೀತಿಯಲಿ ಜಯ ಸಿಕ್ಕಿದ್ದು

ಗೆದ್ದೆನೆಂಬ ಭಾವ ಅವಳಲ್ಲಿ

ಹೇಗೋ ಏನೋ ...........

ತಿಳಿಯದಾಯಿತು ಅವಳು ಹೇಗಿದ್ದಾಳೋ ಏನೋ Sad

ಇಂದಿಗೂ

ನೆನಪುಗಳ ಸರಮಾಲೆಯಲಿ

ನನ್ನವಳ ಪ್ರತಿಬಿಂಬ ಕಾಣುವ ತವಕ.

ಕಾಮೆಂಟ್‌ಗಳಿಲ್ಲ: