ನೋಡ್ತಿರೋರು

ಗುರುವಾರ, ಆಗಸ್ಟ್ 5, 2010

ರಕ್ತದಾನ - ಮಹಾದಾನ

ಪ್ರತಿ ವರ್ಷದ ಜೂನ್ ೧೪ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಾರೆ. ನಿಮ್ಮ ಸುತ್ತ-ಮುತ್ತಲಲ್ಲೇ ಎಷ್ಟೊ ಜನಕ್ಕೆ ರಕ್ತದ ಅವಶ್ಯಕತೆ ಇರುತ್ತದೆ, ಹಾದಿ ಬೀದಿಯಲ್ಲಿ ದಿನಕ್ಕೊಬ್ಬರಾದರೂ ರಸ್ತೆ ಅಫಘಾತ, ಮತ್ಯಾವುದೋ ತೊಂದರೆಯಿಂದ ಬಳಲುತ್ತಾ ಇರುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ,  ರಕ್ತದ ಅವಶ್ಯಕತೆ ಇರುವವರಿಗೆ ನಮ್ಮಿಂದ -ನಿಮ್ಮಿಂದ ಸಹಾಯವಾದರೆ ಅದಕ್ಕೆ ಸಿಗುವ ತುಂಬು ಹೃದಯದ ಅಭಿನಂದನೆಯೇ ವರ್ಣಾತೀತ.

ರಕ್ತದ ಗುಂಪುಗಳು
1. A ರಕ್ತದ ಗುಂಪು.
2. B ರಕ್ತದ ಗುಂಪು.
3. AB ರಕ್ತದ ಗುಂಪು.
4. O ರಕ್ತದ ಗುಂಪು.

ರಕ್ತದಾನಿಗಳ ಗುಂಪುಗಳು
೧. ಸ್ವತಂತ್ರ್ಯ ರಕ್ತದಾನಿಗಳು.
೨. ಬದಲಿ ರಕ್ತದಾನಿಗಳು.
೩. ನಿರಂತರ ರಕ್ತದಾನಿಗಳು.

ಯಾರಿಂದ ಯಾರಿಗೆ ರಕ್ತ ಕೊಡಬಹುದು ಮತ್ತು ಪಡೆಯಬಹುದು

ರಕ್ತದ ಗುಂಪು            ಯಾರಿಗೆ ರಕ್ತ  ಕೊಡಬಹುದು            ಯಾರಿಂದ ರಕ್ತ ಪಡೆಯಬಹುದು
   AB                          AB                           AB, A, B, O
    A                         A ಮತ್ತು AB                      A ಮತ್ತು O
    B                         B ಮತ್ತು AB                      B ಮತ್ತು O
    0                         AB, A, B, 0                       O

ಸಾಮಾನ್ಯ ರಕ್ತದಾನಕ್ಕೆ ಬೇಕಾದ ಕನಿಷ್ಟ ಅರ್ಹತೆಗಳು

೧. ಆರೋಗ್ಯಕರ ವ್ಯಕ್ತಿಯಾಗಿರಬೇಕು.
೨. ವಯಸ್ಸು ೧೭ ಅಥವಾ ಅದಕ್ಕಿಂತ ಮೇಲಿಂದ ೬೦ ವರ್ಷದವರೆಗೆ.
೩. ತೂಕ ಕನಿಷ್ಠ ೪೫ ಕೆಜಿ ಇರಬೇಕು.
೪. ತಾಪಮಾನ ೯೯.೫ (೩೭.೫ಸೆಲ್ಸಿಯಸ್) ಗಿಂತ ಹೆಚ್ಚಿರಬೇಕು.
೫. ಅಂಗೀಕೃತವಾದ ರಕ್ತದ ತಾಪಮಾನ ೧೬೦/೯೦ ಇಂದ ೧೧೦/೬೦.

ಬೆಂಗಳೂರಿನ ರಕ್ತದಾನ ಬ್ಯಾಂಕುಗಳ ವಿಳಾಸ

ರಕ್ತದಾನ ಹೇಗೆ ವೀಡಿಯೊ  ತುಣುಕು
 ಅರವಿಂದ್

ಕಾಮೆಂಟ್‌ಗಳಿಲ್ಲ: