ನೋಡ್ತಿರೋರು

ಶುಕ್ರವಾರ, ಆಗಸ್ಟ್ 6, 2010

ಗುರುತಿನ ಚೀಟಿ ಪ್ರಾಧಿಕಾರ UIDAI


ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜೂನ್ ೨೫ರ ೨೦೦೯ ರಂದು ಲೋಕಸಭೆಯಲ್ಲಿ ಅಸ್ತಿತ್ವಕ್ಕೆ ಬಂದ ಗುರುತಿನ ಚೀಟಿ ವಿತರಣಾ ಯೋಜನೆ, ಮುಂದಿನ ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಗುರುತಿನ ಚೀಟಿಯನ್ನು ನೀಡುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಗೆ ಇನ್ಫೋಸಿಸ್ ಸಂಸ್ಥೆಯ ಪ್ರಧಾನರಾದ ನಂದನ್ ನಿಲಕೇಣಿಯವರನ್ನು ಯೋಜನೆಯ ಮುಖ್ಯಸ್ಥರನ್ನಾಗಿ ಗುರುತಿಸಿ ಪ್ರತಿ ನಾಗರೀಕನಿಗೂ ಗುರುತಿನ ಚೀಟಿಯನ್ನು ಕ್ರಮಬದ್ಧವಾಗಿ ನೀಡುವ ಜವಾಬ್ದಾರಿಯನ್ನು ನೀಡಿತು. ಸರ್ಕಾರ ಯೋಜನೆಗೆ ಅಂಗೀಕಾರ ನೀಡಿದ್ದು, ಶಿಸ್ತು ಮತ್ತು ಬದ್ದತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಬ್ಯೆಯೋಮೆಟ್ರಿಕ್ ಆಧಾರದಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಉತ್ಸುಕವಾಗಿದೆ.



ಗುರುತಿನ ಚೀಟಿ ಪ್ರಾಧಿಕಾರವು ಮುಂದಿನ ೧೨ ರಿಂದ ೧೮ ತಿಂಗಳಿನಲ್ಲಿ ಈ ಯೋಜನೆಯನ್ನು ಜವಾಬ್ದಾರಿಯುತವಾಗಿ ಪೂರ್ಣಗೊಳಿಸುವ ಕಾರ್ಯಕ್ರಮವನ್ನು ಯೋಚಿಸಿದೆ. ಈ ಯೋಜನೆ ಇದೇ ಆಗಸ್ಟ್ ತಿಂಗಳ ೨೦೧೦ ರಿಂದ ಫೆಬ್ರವರಿ ೨೦೧೧ ಪ್ರಾರಂಭವಾಗಲಿದೆ. ಈ ಯೋಜನೆಗೆ ಭಾರತದಲ್ಲಿನ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸೇವೆಯನ್ನು ಉಪಯೋಗಿಸಿಕೊಳ್ಳಲಿದೆ. ಕಳೆದ ವಾರ್ಷಿಕ ಸಾಲಿನಲ್ಲಿ ಅಂದಾಜು ೧೨೦ ಕೋಟಿ ರೂಪಾಯಿಗಳನ್ನು ಮತ್ತು ಪ್ರಸ್ತಕ ವರ್ಷದಲ್ಲಿ ಅಂದಾಜು ೧೯೦೦ ಕೋಟಿ ರೂಪಾಯಿಗಳನ್ನು ಈ ಪ್ರಕ್ರಿಯೆಗೆ ಪರಿಗಣಿಸಲಾಗಿದೆ.

ಈಗಾಗಲೇ ಪ್ರಾಧಿಕಾರ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದ್ದು, ಮುಂದಿನ ೫ ವರ್ಷಗಳಲ್ಲಿ ೬೦೦ ಮಿಲಿಯನ್ ಗುರುತಿನ ಚೀಟಿಗಳನ್ನು ವಿತರಿಸುವ ಯೋಜನೆ ಹೊಂದಿದೆ. ಕಳೆದ ಜನವರಿಯಲ್ಲಿ ಗುರುತಿನ ಚೀಟಿ ವಿನ್ಯಾಸ, ಅಭಿವೃದ್ದಿ, ಪರೀಕ್ಷೆ, ಬೆಂಬಲಗಳ ತಂತ್ರಾಂಶಗಳ ನಿರ್ವಹಣೆಯ ಬಿಡ್ ಕರೆದಿತ್ತು. ದೇಶದ ೧೫ಕ್ಕೂ ಹೆಚ್ಚಿನ ಸಾಫ್ಟ್ ವೇರ್ ಸಂಸ್ಥೆಗಳು ಈ ಕಾರ್ಯಕ್ಕಾಗಿ ಉತ್ಸುಕತೆಯಿಂದ ಬಿಡ್ ಸಲ್ಲಿಸಿತ್ತು. ಅದರಲ್ಲಿ ಇನ್ಫೋಸಿಸ್, ವಿಪ್ರೋ ಪ್ರಮುಖ ಸಂಸ್ಥೆಗಳಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಈ ಸಂಸ್ಥೆಗಳನ್ನು ಹೊರಗಿಟ್ಟು ಈಗ ಮ್ಯೆಂಡ್ ಟ್ರೀ ಸಂಸ್ಥೆಗೆ ಇದರ ಸೇವಾ ಜವಾಬ್ದಾರಿಯನ್ನು ನೀಡಿದೆ. ಬ್ಯೆಯೋಮೆಟ್ರಿಕ್ ಅಭಿವೃದ್ಧಿಗಾಗಿ ಅಕ್ಸೆಂಚರ್, ಮಹಿಂದ್ರಾ ಸಂಸ್ಥೆಗಳಿಗೆ ಜವಾಬ್ದಾರಿಯನ್ನು ಹೊರಿಸುವ ಯೋಚನೆಯಿದ್ದು. ಯೋಜನೆಯ ಮಾಹಿತಿ ತಂತ್ರಜ್ಣಾನ ಸೇವೆಗಳಾದ ಕಂಪ್ಯೂಟರೀಕರಣ, ದತ್ತಾಂಶ ಕ್ರೋಢಿಕರಣ, ಸ್ಮಾರ್ಟ್ ಕಾರ್ಡಿನಂತಹ ವೆಚ್ಚಗಳಿಗೆ ಈಗಾಗಲೇ ೧೫ ರಿಂದ ೨೦ ಕೋಟಿ ರೂಪಾಯಿಗಳು ವ್ಯಯಿಸಲಾಗಿದೆ. ಪ್ರಾಧಿಕಾರದ ಇನ್ನಿತರ ಹಲವು ಕಾರ್ಯಕ್ರಮಗಳಿಗೆ ಈಗ ಟೆಂಡರ್ ಕರೆದಿದ್ದು, ಆಸಕ್ತರು ಟೆಂಡರ್ ಅರ್ಜಿ ಸಲ್ಲಿಸಬಹುದು.

ಸಂಸ್ಥೆಯ ಆಡಳಿತಾತ್ಮಕ ಪ್ರಕಾರ :

೧. ಪ್ರಧಾನ ಕಾರ್ಯಾಲಯ - ಇಲ್ಲಿ ಸಂಸ್ಥೆಯ ಮುಖ್ಯಸ್ಥರು, ಆಡಳಿತಾತ್ಮಕ ಅಭಿಯಂತರುಗಳು, ೩ ಮಂದಿ ಅಭಿಯಂತರುಗಳು, ೩ ಮಂದಿ ಕಿರಿಯ ಅಭಿಯಂತರುಗಳು, ೩ ಮಂದಿ ಅಧೀಕ್ಷಕರು, ಮತ್ತು ಕಿರಿಯ ಅಧೀಕ್ಷಕರ ನೇಮಕಾತಿ ಮುಂದುವರೆದಿದ್ದು, ಹಣಕಾಸು ಮತ್ತು ವ್ಯವಹಾರಗಳ ಅತ್ಯುತ್ತಮ ಹಿಡಿತದಲ್ಲಿದ್ದು ಅದರ ಜವಾಬ್ದಾರಿಯನ್ನು ಒಬ್ಬ ಮುಖ್ಯ ಅಭಿಯಂತರರಿಗೆವಹಿಸಿದೆ.

೨. ರಾಜ್ಯ/ಪ್ರದೇಶಾವಾರು ಕಾರ್ಯಾಲಯ - ಇಲ್ಲಿ ರಾಜ್ಯವಾರು ೩ ಅಭಿಯಂತರುಗಳು, ೩ ಅಧೀಕ್ಷಕರುಗಳು, ಒಬ್ಬ ಹಿರಿಯ ಶ್ರೇಣಿಯ ನಿರ್ವಹಣಾಕಾರರು, ಮತ್ತು ಹಣಕಾಸು ಮತ್ತು ವ್ಯವಹಾರಗಳ ಮೇಲ್ವಿಚಾರಕರುಗಳನ್ನು ನೇಮಿಸಿದೆ.

೩. ಯೋಜನಾ ಉಸ್ತುವಾರಿ ಕೇಂದ್ರ - ಈ ಯೋಜನೆಗೆ ಉಸ್ತುವಾರಿ ಕೆಲಸವನ್ನು ನಿರ್ವಹಿಸಲು ಬಲವಾದ ಮತ್ತು ಅನುಭವೀಯ ವ್ಯಕ್ತಿಗಳನ್ನು ಆಯ್ಕೆಮಾಡಿಕೊಂಡಿದ್ದು, ಪ್ರತಿ ಹಂತದ ರೂಪುರೇಷುಗಳನ್ನು ಉಸ್ತುವಾರಿ ಅಭಿಯೋಜಕರು ನಿರ್ವಹಿಸಲಿದ್ದಾರೆ.

ಈ ಎಲ್ಲ ಸ್ತರದ ನಿಯೋಜಕರು ಮತ್ತು ಆಯ್ಕೆಗೊಂಡ ವ್ಯಕ್ತಿಗಳಿಗೆ ತರಬೇತಿಯನ್ನು ಈಗಾಗಲೇ ನೀಡಲಾಗಿದೆ.

ಯಾವುದೇ ಸೇವಾಸಂಸ್ಥೆಗಳು ಈ ಯೋಜನೆಯ ಗುರುತಿನ ಚೀಟಿಯ ನಿರ್ವಹಣೆ ಮತ್ತು ಹಂಚುವಿಕೆಯಲ್ಲಿ ಆಸಕ್ತಿಯಿದ್ದಲ್ಲಿ, webadmin-uidai@nic.in ಗೆ ಮಿಂಚೆ ಕಳಿಸಿ ನೀತಿ ನಿಯಮಗಳ, ಅರ್ಹತೆಗಳ ವಿವರವನ್ನು ಪಡೆಯಬಹುದು.







ಹೆಚ್ಚಿನ ಮಾಹಿತಿಗಾಗಿ ಗುರುತಿನ ಚೀಟಿ ಪ್ರಾಧಿಕಾರದ ವೆಬ್ ಸ್ಯೆಟಿನಲ್ಲಿ ಪಡೆಯಬಹುದು.


ಅರವಿಂದ್

ಕಾಮೆಂಟ್‌ಗಳಿಲ್ಲ: