ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಒಂದು ಸುಂದರ ಪ್ರೇಮ ಪತ್ರ ಮತ್ತದರ ಒಕ್ಕಣೆಯ ಉತ್ತರ

ಒಬ್ಬ ತರುಣ ತನ್ನ ತರುಣಿಗೆ ಬರೆದ ಪ್ರೇಮಪತ್ರ ಪ್ರಶ್ನೆ ಹಾಗೂ ಉತ್ತರಗಳ ಸರಮಾಲೆ
ಆತ ಹೀಗೆ ಬರೆಯುತ್ತಾನೆ......


ನನ್ನ ಪ್ರೀತಿಯ ಅರುಂಧತಿ............


ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು, ಈ ಆಯ್ಕೆಗಳನ್ನು ಉಪಯೋಗಿಸಿ
(ಅ) ೧೦ ಅಂಕ
(ಆ) ೫ ಅಂಕ
(ಇ) ೩ ಅಂಕ

೧) ನೀನು ತರಗತಿಗೆ ಬಂದ ತಕ್ಷಣ ನಿನ್ನ ಕಣ್ಣುಗಳು ನನ್ನನ್ನೇ ಹುಡುಕುತ್ತವೆ, ಏಕೆಂದರೆ ….

(ಅ) ಪ್ರೀತಿ
(ಆ) ನೀನು ನನ್ನನ್ನು ನೋಡದೆ ಇರಲಾಗುವುದಿಲ್ಲ
(ಇ) ನಿಜವಾಗಲು ನೀ ಇದನ್ನೇ ಮಾಡುತ್ತಿದ್ದೀಯಾ

೨) ಯಾವಾಗಲಾದರೂ ಪ್ರಾಧ್ಯಾಪಕರು ಹಾಸ್ಯ ಮಾಡಿದಾಗ, ನೀನು ನಗುತ್ತಾ ನನ್ನ ಕಡೆಗೆ ತಿರುಗುತ್ತೀಯಾ, ಏಕೆಂದರೆ…….

(ಅ) ನೀನು ಯಾವಾಗಲೂ ನನ್ನನ್ನೇ ನೋಡುತ್ತಿರಲು ಇಚ್ಚಿಸುತ್ತೀಯಾ
(ಆ) ನೀನು ನನಗೆ ಹಾಸ್ಯಗಳು ಇಷ್ಟವೋ ಇಲ್ಲವೋ ಎಂದು ಪರೀಕ್ಷಿಸುತ್ತೀಯಾ
(ಇ) ನೀನು ನನ್ನ ನಗುವಿಗಿಗಾಗಿ ಹಾತೊರೆಯುತ್ತೀಯಾ

೩) ನೀನು ತರಗತಿಯಲ್ಲಿ ಹಾಡುವಾಗ, ನಾನು ತರಗತಿಗೆ ಬಂದರೆ ತಕ್ಷಣ ಹಾಡುವುದ ನಿಲ್ಲಿಸುತ್ತೀಯಾ, ಏಕೆಂದರೆ……….

(ಅ) ನೀನಗೆ ನನ್ನ ಮುಂದೆ ಹಾಡಲು ತುಂಬಾ ನಾಚಿಕೆ
(ಆ) ನನ್ನ ಆಗಮನದಿಂದ ಸ್ಪೂರ್ತಿಗಾಗಿ
(ಇ) ನೀನು ನನಗೆ ಹಾಡುಗಳು ಇಷ್ಟವಾಗುತ್ತವೋ ಇಲ್ಲವೋ ಎನ್ನುವ ಭಯದಿಂದ

೪) ನೀ ಮಗುವಾಗಿದ್ದಾಗ ತೆಗೆಸಿದ ಪೋಟೋಗಳನ್ನು ತೋರಿಸುವಾಗ, ನನಗೊಂದು ಕೊಡೆಂದು ಕೇಳಿದರೆ ನೀನು ಮುಚ್ಚಿಟ್ಟುಕೊಳ್ಳುತ್ತೀಯಾ. ಏಕೆಂದರೆ………

(ಅ) ನಿನಗೆ ನಾಚಿಕೆಯಾಗುತ್ತದೆ,
(ಆ) ನಿನಗೆ ಕಷ್ಟವಾಗುತ್ತದೆ
(ಇ) ನಿನಗೇನು ಗೊತ್ತಿಲ್ಲ

೫) ನಾವೆಲ್ಲರೂ ಪ್ರವಾಸ ಹೋಗಿದ್ದಾಗ, ನಾನು ಮತ್ತು ನನ್ನ ಗೆಳೆಯ ನಿನಗೆ ಬೆಟ್ಟ ಹತ್ತಲು ಸಹಾಯವಾಗಿ ಕ್ಯೆ ನೀಡಿದಾಗ, ನೀನು ನನ್ನ ಗೆಳೆಯನ ಕ್ಯೆ ಹಿಡಿಯುತ್ತೀಯಾ. ಏಕೆಂದರೆ

(ಅ) ನೀನು ನನಗೆ ದುಃಖ ಕೊಡಲು ಇಷ್ಟಪಡುತ್ತೀಯಾ.
(ಆ) ನೀನು ಬೆಟ್ಟವನ್ನು ಹತ್ತಿದ ಮೇಲೆ ನನ್ನ ಕ್ಯೆಬಿಡಲು ಇಷ್ಟಪಡುವುದಿಲ್ಲ
(ಇ) ನಿನಗೆ ಗೊತ್ತಿಲ್ಲ

೬) ನೀನು ನೆನ್ನೆ ನಿನ್ನ ಮನೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ, ಆದರೆ ನೀನು ಬಸ್ಸ್ ಬಂದರೂ ಹತ್ತಲಿಲ್ಲ

(ಅ) ನೀನು ನನಗಾಗಿ ಕಾಯುತ್ತಿದ್ದೆ
(ಆ) ನೀನು ನನ್ನ ಕನಸನ್ನೇ ಕಾಣುತ್ತಿದ್ದೆ, ಆದ್ದರಿಂದ ಬಸ್ಸ್ ಬಂದಿದ್ದು ಗೊತ್ತಾಗಲಿಲ್ಲ
(ಇ) ಬಸ್ಸ್ ತುಂಬಾ ಜನ ಇದ್ದು, ನನ್ನೊಂದಿಗೆ ಬ್ಯೆಕ್ನಲ್ಲಿ ಹೋಗಲು

೭) ನೀನು ನಿನ್ನ ತಂದೆ-ತಾಯಿಗಳಿಗೆ ನನ್ನನ್ನು ಪರಿಚಯಿಸಿದೆ. ಏಕೆಂದರೆ……

(ಅ) ನಾನು ನಿಮ್ಮ ಮನೆಯ ಭಾವಿ ಅಳಿಯ
(ಆ) ನಿನಗೆ ನನ್ನ ವಿಷಯವಾಗಿ ನಿನ್ನ ತಂದೆ- ತಾಯಿಯ ಅಭಿಪ್ರಾಯ ಕೇಳಲು
(ಇ) ನೀನು ಕೇವಲ ನಿನ್ನ ತಂದೆ-ತಾಯಿಯನ್ನು ನನಗೆ ಪರಿಚಯಿಸಲು

(೮) ನಾನು ಗುಲಾಬಿ ಹೂ ಮುಡಿದ ಹುಡುಗಿಯರು ನನಗಿಷ್ಟ ಎಂದೆ, ಮಾರನೇ ದಿನ, ನಿನ್ನ ಮುಡಿಯಲ್ಲೂ ಗುಲಾಬಿ ಹೂ ಏರಿತ್ತು. ಏಕೆಂದರೆ…….

(ಅ) ನನ್ನ ಅಭಿನಂದನೆಗಾಗಿ
(ಆ) ನೀನು ಸಹ ಗುಲಾಬಿ ಹೂ ಇಷ್ಟಪಡುತ್ತೀಯಾ
(ಇ) ಆಕಸ್ಮಿಕವಾಗಿ ನಿನಗೆ ಗುಲಾಬಿ ಹೂ ಸಿಕ್ಕಿತ್ತು

(೯) ಆ ದಿನ, ನನ್ನ ಹುಟ್ಟುಹಬ್ಬಕ್ಕೆ ನೀನು ಸಹ ದೇವಸ್ಥಾನಕ್ಕೆ ೬ ಘಂಟೆಗೆಲ್ಲ ಬಂದಿದ್ದೆ. ಏಕೆಂದರೆ

(ಅ) ನಿನಗೆ ನನ್ನ ಜೊತೆಯಲ್ಲಿ ದೇವರಿಗೆ ಪ್ರಾರ್ಥನೆ ಮಾಡಬೇಕೆನಿಸಿತ್ತು
(ಆ) ಬೇರೆಯವರು ಶುಭಾಶಯ ತಿಳಿಸುವ ಮೊದಲು ನೀನು ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುವ ಸಲುವಾಗಿ
(ಇ) ನೀನು ಆಸ್ಥಿಕಳಾಗಿದ್ದುದ್ದರಿಂದ ದೇವಸ್ಥಾನದಲ್ಲಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು.

ಈ ಮೇಲಿನ ಪ್ರಶ್ನೆಗಳಿಗೆ ನೀನು ೪೦ಕ್ಕಿಂತ ಹೆಚ್ಚಿನ ನೀನು ಹೆಚ್ಚಾಗಿ ನನ್ನನು ಪ್ರೀತಿಸುತ್ತೀಯಾ. ನೀನು ೩೦ಕ್ಕಿಂತಾ ಹೆಚ್ಚು ಅಥವ ೪೦ಕ್ಕಿಂತಾ ಕಡಿಮೆ ಅಂಕಗಳಿಸಿದ್ದರೆ, ನನ್ನ ಮೇಲಿನ ಪ್ರೀತಿ ನಿನ್ನನ್ನು ಆಕರ್ಷಿಸುತ್ತಿದೆ, ಅಥವಾ ೩೦ಕ್ಕಿಂತಾ ಕಡಿಮೆ ಅಂಕಗಳಿಸಿದ್ದರೆ ನಾನು ಸಹ ನಿನ್ನನ್ನು ಪ್ರೀತಿಸುತ್ತೀನೋ ಇಲ್ಲವೋ ಗೊಂದಲದಲ್ಲಿದ್ದೀಯಾ . ನಿನ್ನ

ಉತ್ತರವನ್ನು ಬೇಗ ತಿಳಿಸು.

ಕಾಯುತಿರುವೆ ನಿನಗಾಗಿ ಅರವಿಂದ್

ಅರುಂಧತಿ ಉತ್ತರಿಸದ ರೀತಿ ಅದು ಪ್ರಶ್ನೆ ಹಾಗೂ ಉತ್ತರದ ರೂಪದಲ್ಲಿ



ಹಲೋ ಅರವಿಂದ್

ದಯವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಹೌದು/ಇಲ್ಲಾ ಎಂದು ತಿಳಿಸು

೧) ಯಾರೇ ಆದರೂ ತರಗತಿಯ ಮೊದಲ ಬೆಂಚಿನಲ್ಲಿ ಕುಳಿತಿದ್ದರೆ, ತರಗತಿಗೆ ಬಂದಾಗ ಅವರನ್ನು ನೋಡುವುದು ಸಹಜ ?
(ಅ) ಹೌದು (ಆ) ಇಲ್ಲ

೨) ಒಂದು ಹುಡುಗಿ ನಗುತ್ತಾ ಯಾರನ್ನಾದರೂ ನೋಡಿದರೆ, ಅದೇ ಏನು ಪ್ರೀತಿ ?
(ಅ) ಹೌದು (ಆ) ಇಲ್ಲ

೩) ಯಾರದರೂ ಹಾಡುತ್ತಿದ್ದರೆ ತಕ್ಷಣಕ್ಕೆ ಕೆಲವು ಸಾಲುಗಳು ಮರೆತರೆ ಹಾಡುವುದನ್ನು ನಿಲ್ಲಿಸುತ್ತಾರೆ ಅಲ್ಲವೇ ?
(ಅ) ಹೌದು (ಆ) ಇಲ್ಲ

೪) ನಾನು ನನ್ನ ಗೆಳತಿಗೆ ನನ್ನ ಪೋಟೊಗಳನ್ನು ತೋರಿಸುತ್ತಿದ್ದಾಗ, ನೀನು ಮೂಗು ತೂರಿಸಿದೆ ?
(ಅ) ಹೌದು (ಆ) ಇಲ್ಲ

೫) ನಾನು ಬೇಕೆಂತಲೇ ಬೆಟ್ಟವನ್ನು ಹತ್ತುವಾಗ ನಿನ್ನ ಸಹಾಯ ಕೇಳಲಿಲ್ಲ, ಇನ್ನೂ ನಿನಗೆ ಅರ್ಥವಾಗಲಿಲ್ಲವೇ ?
(ಅ) ಹೌದು (ಆ) ಇಲ್ಲ

೬) ನಾನು ನನ್ನ ಗೆಳತಿ ಅಂಜಲಿಗಾಗಿ ಬಸ್ಸ್ ನಿಲ್ದಾಣದಲ್ಲಿ ಕಾಯಬಾರದೇ ?
(ಅ) ಹೌದು (ಆ) ಇಲ್ಲ

೭) ನಾನು ನಿನ್ನನ್ನು ನನ್ನ ತಂದೆ-ತಾಯಿಯರಿಗೆ ಗೆಳೆಯನೆಂದು ಪರಿಚಯಿಸಲೇಬಾರದೇ ?
(ಅ) ಹೌದು (ಆ) ಇಲ್ಲ

೮) ನೀನು ತಾವರೆ, ಹೂಕೋಸು, ಬಾಳೆಹಣ್ಣನ್ನು ಇಷ್ಟಪಡುತ್ತೀನಿ ಅಂದಿದ್ದೆ, ಹೌದಲ್ವೇ ?
(ಅ) ಹೌದು (ಆ) ಇಲ್ಲ

೯) ಅಯ್ಯೋ, ಅಂದು ನಿನ್ನ ಹುಟ್ಟುಹಬ್ಬವೇ ? ಆದ್ದರಿಂದ ನಿನ್ನನ್ನು ದೇವಸ್ಥಾನದಲ್ಲಿ ನಾ ನೋಡಿದೆ, ನಾನು ಪ್ರತಿದಿನ ದೇವಸ್ಥಾನಕ್ಕೆ ಅದೇ ಸಮಯಕ್ಕೆ ಹೋಗುತ್ತೇನೆ, ನಿನಗಿದು ಗೊತ್ತೆ ?
(ಅ) ಹೌದು (ಆ) ಇಲ್ಲ

ಈ ಮೇಲಿನೆ ಎಲ್ಲಾ ಪ್ರಶ್ನೆಗಳಿಗೆ ನಿನ್ನ ಉತ್ತರ ಹೌದು ಎನ್ನುವುದಾದರೆ "ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಅಥವಾ ಎಲ್ಲ ಪ್ರಶ್ನೆಗಳು ನಿನ್ನ ಉತ್ತರ ಇಲ್ಲಾ ಎನ್ನುವುದಾದರೆ "ನಿನಗೆ ಪ್ರೀತಿಯ ಅರ್ಥವೇ ಗೊತ್ತಿಲ್ಲಾ"

(ಭಾಗಶ: ಎಲ್ಲವೂ ನಿಶೇಷವಾಗಿದೆ ಈಗ)

ಕಾಮೆಂಟ್‌ಗಳಿಲ್ಲ: