ನೋಡ್ತಿರೋರು

ಸೋಮವಾರ, ಜೂನ್ 2, 2014

ರಂಗೋಲಿ....... ಚಿತ್ತ ಚಿತ್ತಾರಗಳ ನಡುವೆ - ಸಂಚಿಕೆ ೨


ಬಹಳ ದಿನಗಳಾಗಿತ್ತು.. ತಲೆಗೆ ಹಾಗೂ ಬರವಣಿಗೆಗೆ ಕೆಲಸ ಕೊಟ್ಟು :-) . ನೆನಪುಗಳು ಅಳಿಸಿಹೋಗುವ ಮೊದಲು ಬರೆದುಬಿಡೋಣ.., ಸುನಂದಳ ಬದುಕು ನೆನಪಲ್ಲೇ ಕಳೆದುಹೋಗಬಾರದೆಂಬ ಧಾವಂತ  ರಂಗೋಲಿ ಚಿತ್ತ ಚಿತ್ತಾರಗಳ ನಡುವೆಯ ಸರಣಿಯನ್ನು ಮುಂದುವೆರಿಸುತ್ತಿದ್ದೇನೆ..

 ಹಿಂದಿನ ಸರಣಿ

 
ಮುಂದಿನ ಕೆಲವೇ ದಿನಗಳಲ್ಲಿ ನನ್ನ ಮಾನಸಿಕ ಆರೋಗ್ಯ ದ್ಯೆಹಿಕ ಆರೋಗ್ಯ ಎಲ್ಲವೂ ಕ್ಷೀಣಿಸುತ್ತು.... ನಿರ್ದಯಿಗಳ ಮುಂದೆ ನಾನು ಅದಿನ್ನೆಂತಹ ಬೇಡಿಕೆಯಿಟ್ಟರೂ... ಅವರ ಬೇಡಿಕೆಗಳ ಮುಂದೆ ನನ್ನದೆಲ್ಲವೂ ಗೌಣವಾಗಿತ್ತು. ಸ್ವಲ್ಪ ದಿನಗಳ ನಂತರ ನನಗೂ ಇವೆಲ್ಲ ರೂಢಿಯಾಗಿ ಹೋಗಿತ್ತು. ಅದೇ ಸಮಯಕ್ಕೆ ಸೌಭಾಗ್ಯಮ್ಮನಿಗೆ ಆರೋಗ್ಯ ಕ್ಯೆಕೊಟ್ಟಿತ್ತು. ಏಳುವುದಕ್ಕೂ ಆಗದ ಸಂಧರ್ಬದಲ್ಲೂ ಆಕೆಯ ವ್ಯವಹಾರ ನಡೆಯುತ್ತಲೇ ಇತ್ತು. ಒಂದು ದಿನ ಬಹುಶಃ ಆಗಸ್ಟಿನಲ್ಲಿರಬಹುದು... ಆಕೆಯ ದೇಹದ ಬಲಭಾಗ ಪೂರ್ತಿ ಪಾಶ್ವವಾಯು ಉಂಟಾಗಿ ಮಲಗಿದ ಜಾಗದಿಂದೇಳಲು ಆಗದೆ, ಆಕೆಯ ಎಲ್ಲ ಕೆಲ್ಸಗಳು ಅಲ್ಲೇ ನಡೆಯುತ್ತಿತ್ತು. ಆ ಸಮಯಕ್ಕೆ ಇವಳೊಂದಿಗಿನ ವ್ಯವಹಾರಿಗಳಾಗಲಿ, ಇವಳೇ ಸಾಕು ಬೆಳೆಸಿದ ಜನರಾಗಲಿ ಯಾರೊಬ್ಬರೂ ಇವಳ ಸಹಾಯಕ್ಕೆ ಬರಲಿಲ್ಲ. ಕ್ರಮೇಣ ವ್ಯವಹಾರವೂ ನಿಂತಿತು.

ಅದಿನ್ನೆಂತಹ ದುರ್ದೆವವೋ ಗೊತ್ತಿಲ್ಲ. ಆಕೆಯೊಂದಿಗೆದ್ದ ಅದೆಷ್ಟೋ ಹುಡುಗೀಯರು ಹೇಳದೆ ಕೇಳದೆ ಅಲ್ಲಿಂದ ಕಾಲ್ಕಿತ್ತರು. ಸೌಭಾಗ್ಯಮ್ಮ ಜೀವನ ಈಗ ಅಕ್ಷರಸಹ ಬೀದಿಗೆ ಬಂದು ನಿಂತಿತ್ತು. ಆಕೆಗೆ ಯಾರೂ ಒಂದು ಲೋಟ ನೀರು ಕೊಡದ ಸ್ಥಿತಿ ತಲುಪಿತ್ತು ಆ ಮನೆ. ಬಹುಶಃ ಆಕೆ ಆ ಹುಡುಗೀಯರ ಪಾಲಿಗೆ ರಾಕ್ಷಸರೂಪ ತಾಳಿದ್ದು, ಅದೆಲ್ಲದಕ್ಕೂ ಸೇಡಿನಂತೆ ಅವಳ ಮುಂದೆ ಬಂದು ನಿಂತಿತ್ತು. ನನಗೂ ಇತರ ಹುಡುಗೀಯರಂತೆ ಅಲ್ಲಿಂದ ಹೊರಡಲು ಇಷ್ಟವಿತ್ತು. ಆದರೆ ಎಂದೋ ಒಂದು ತುತ್ತು ಅನ್ನ ನೀಡಿದರಿಂದಲೋ ಅಥವಾ ಆ ವ್ಯವಹಾರಕ್ಕೆ ನಾನು ಒಗ್ಗಿಕೊಂಡು ಬೇರೆ ದಾರಿಗಳೆಲ್ಲವೂ ಇಲ್ಲವೆಂದೂ ಭಾವಿಸದರಿಂದಲೋ, ಆಕೆಯೊಂದಿಗೆ ನಿಲ್ಲುವ ಮನಸ್ಸಾಗಿ, ಅವಳ ಶುಶ್ರೂಷೆಗೆ ನಾನು ಹಗಲು-ರಾತ್ರಿಗಳೆನ್ನದೆ ಇದ್ದೆ. ಒಂದೆರಡು ತಿಂಗಳಾಗುವಷೃರಲ್ಲಿ ಆಕೆಯ ಬಲಗ್ಯೆ ಸ್ವಾಧೀನ ಬಂದಂತಾಗಿ, ಆಕೆಗೂ ನನ್ನ ಬಗ್ಗೆ ಎಲ್ಲಿಲ್ಲದ ಅತೀವ ವಾತ್ಸಲ್ಯ ಮೂಡಿತ್ತೇನೋ..?

ಆಕೆ ಪ್ರತಿ ಕೆಲ್ಸಕ್ಕೂ ಸುನಂದ ಎನ್ನದೆ ಅವಳಿಗೆ ಬೇರೆ ಏನು ನೆನಪಿರುತ್ತಿರಲಿಲ್ಲ. ಒಮ್ಮೆ ಆಕೆ ನನ್ನ ಪಕ್ಕದಲ್ಲಿ ಕುರಲಿಕ್ಕೆ ಹೇಳಿ ಅದೆಂತದೋ ಒಂದಷ್ಟು ಪತ್ರ ತನ್ನ ಬೀರುವಿನ ಕಪಾಟಿನಲ್ಲಿದೆಯೆಂದೂ ಅದನ್ನು ತೆಗೆದುಕೊಂಡು ಬರಲು ಹೇಳಿದಳು. ಆ ಪತ್ರದಲ್ಲಿರುವಂತೆ ಓದಲು ಹೇಳಿ, ಹಾಗೂ ನನ್ನ ತರುವಾಯ ಇದರಲ್ಲಿನ ಒಂದು ಪತ್ರವನ್ನೂ ಜೊತೆಗೆ ಒಂದಷ್ಟು ಹಣವನ್ನು ಬೆಂಗಳೂರಿನಲ್ಲಿರುವ ಆಕೆಯ ಮಗನಿಗೆ ತಲುಪಿಸುವಂತೆ ಹೇಳಿದಳು. ಆಗಷ್ಟೆ ನನಗೆ ಆಕೆಗೂ ಸಂಸಾರವಿದ್ದದ್ದು ಹಾಗೂ ಆಕೆಯ ಪತಿಯೇ ಇಂತಹ ವ್ಯವಹಾರಕ್ಕೆ ಇವಳನ್ನು ದೂಡಿದ್ದು, ಮತ್ತು ಮಗ ಇದೆಲ್ಲವನ್ನೂ ನೋಡಿ ಇವರೊಂದಿಗಿರದೇ ಬೆಂಗಳೂರಿಗೆ ಬಂದದ್ದು ಮತ್ತು ಇಲ್ಲಿಯೇ ಕೆಲಸ ಮಾಡಿಕೊಂಡಿರುವುದು, ಎಲ್ಲವೂ ತಿಳಿದದ್ದು.

ಈ ಘಟನೆಯಾಗಿ ಒಂದೆರಡು ವಾರಕ್ಕೆ ಅತಿಯಾದ ರಕ್ತದೊತ್ತಡದಿಂದ ಸೌಭಾಗ್ಯಮ್ಮ ತೀರಿಹೋದಳು. ಅವತ್ತಿಗೆ ಅವಳ ಕರ್ಮಕಾರ್ಯಗಳನ್ನು ಮಾಡಲು ನನ್ನ ಬಳಿ ಹಣವಿರಲಿಲ್ಲ. ಅವಳೇ ನೀಡಿದ್ದ ಹಣದಲ್ಲಿ ಎಲ್ಲವನ್ನೂ ಮುಗಿಸಿದ್ದಾಯಿತು. ಸೌಭಾಗ್ಯಮ್ಮ ಸತ್ತಾಗ ಅವಳು ನೀಡಿದ್ದ ಮಗನ ವಿಳಾಸಕ್ಕೆ ಟೆಲಿಗ್ರಾಂ ನೀಡಿದ್ದರೂ ಮಗ ಬರದುದರಿಂದ ಆ ಕಾರ್ಯಗಳನ್ನೆಲ್ಲ ಹೆಣ್ಣಾಗಿ ನಾನೇ ನಿಂತು ಮಾಡಿದೆ.

ಆವತ್ತಿಗೆ ನಾನು ನಿಜಕ್ಕೂ ತಂದೆ ತಾಯಿಯಿದ್ದರೂ ಅನಾಥೆಯೆಂಬ ಭಾವನೆ ಕಾಡುತ್ತಿತ್ತು. ನನ್ನ ತಂದೆ ತಾಯಿಗಳ ನೆನಪು ಬಹಳ ಕಾಡಿದ್ದೆ ಐದು ವರ್ಷಗಳ ನಂತರ ಅರವಿಂದ್. ಮತ್ತೊಮ್ಮೆ ಅವರ ಬಳಿ ಹೋಗಿ ಮಗುವಂತೆ ನನ್ನಮ್ಮನ ತೊಡೆಯೇರಿ ಇಷ್ಟು ದಿನ ನಡೆದ ಎಲ್ಲವನ್ನೂ ಹೇಳಿಕೊಳ್ಳುವ ಎಂಬ ಆಲೋಚನೆ ಒಂದು ಕಡೆಯಾದರೆ, ನನ್ನ ಜೀವನದಲ್ಲಿ ಆದ ಘಟನೆಗಳನ್ನು ಕೇಳಿ ಅವರನ್ನು ಎಲ್ಲಿ ಕಳೆದುಕೊಳ್ಳುವೆನೋ ಎಂಬ ಧಾವಂತ ಮತ್ತೊಂದು ಕಡೆ. ಜೊತೆಗೆ ಸೌಭಾಗ್ಯಮ್ಮ ಹೇಳಿದ್ದ ಬೆಂಗಳೂರಿನಲ್ಲಿ ಅವಳ ಮಗನಿಗೆ ತಲುಪಿಸಬೇಕಾದ ಕಾಗದ ಪತ್ರ ನೆನಪಿಗೆ ಬಂತು..  

ಅವೆಲ್ಲವನ್ನೂ ಒಂದು ಚೀಲದಲ್ಲಿ ಸೇರಿಸಿಕೊಂಡು ಅನಂತಪುರದಲ್ಲಿ ತಂದೆ ತಾಯಿಯನ್ನು ನೋಡಿಕೊಂಡು ಅಲ್ಲಿಂದ ಬೆಂಗಳೂರಿಗೆ ಹೋಗುವ ಆಲೋಚನೆಗೆ ಹ್ಯೆದರಾಬಾದ್ ಬಸ್ ಸ್ಟಾಂಡ್ ಸೇರಿದ್ದೆ.
 
ಮುಂದುವರೆಯುವುದು......

ಕಾಮೆಂಟ್‌ಗಳಿಲ್ಲ: