ಭಾಗ ೧
ಭಾರತದ ಇತಿಹಾಸದಲ್ಲೇ ಕಾಣದಷ್ಟು ಕರಾಳ ದಿನ ೨೨ನೇ ಜನವರಿ ೨೦೧೧, ಆಡಳಿತ ಪಕ್ಷವೇ ಬಂದ್ ಕರೆ ನೀಡಿದ್ದು, ದೇಶದಲ್ಲಿ ಇದೇ ಮೊದಲು, ಒಂದೊಮ್ಮೆ ತುರ್ತು ಪರಿಸ್ಥಿತಿ ಎದುರಿಸಿದ್ದ ಭಾರತ ಸರ್ಕಾರ, ಕೆಲವೇ ದಿನಗಳಲ್ಲೇ ತನ್ನ ಸರಿ ದಾರಿಯನ್ನು ಕಂಡುಕೊಂಡು ಮುಂದೆ ಇಂತಹ ಪರಿಸ್ಥಿತಿ ಬಂದೊದಗದಂತೆ ನೋಡಿಕೊಳ್ಳುತ್ತಲೇ ಬಂದಿದೆ. ಇಂತಹ ಭವ್ಯ ಭಾರತದ ಸುದೀರ್ಘ ೬೦ ವರ್ಷಗಳ ಇತಿಹಾಸದಲ್ಲಿ ಇಂದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಬಂದ್ ಆಗುವುದಕ್ಕೆ ಕಾರಣವಾದರೂ ಏನು ? ಒಬ್ಬ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಹೊತ್ತ ವ್ಯಕ್ತಿಗೆ ಮತ್ತೊಬ್ಬ ಮಹೋನ್ನತ ಜವಾಬ್ದಾರಿ ಹೊತ್ತ ವ್ಯಕ್ತಿಯು ರಾಜ್ಯಕ್ಕೆ ಮಾಡಿದ ಮೋಸವನ್ನು ಸಾಬೀತುಪಡಿಸಲು ಅವಕಾಶ ನೀಡಿದ್ದು, ಅದು ತಪ್ಪೇ ? ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ತಪ್ಪೇ ಮಾಡಲಾರನೇ ? ಕೇವಲ ಜನ ಸಾಮಾನ್ಯರು ಮಾತ್ರ ತಪ್ಪು ಮಾಡುವರೇ ? ಅವರಿಗೆ ಮಾತ್ರ ಶಿಕ್ಷೆಯೇ ?
ಆದದ್ದೇನು ………?
ಕರ್ನಾಟಕದ ಇಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಅಖಂಡ ರಾಜಕೀಯ ಇತಿಹಾಸದಲ್ಲಿ ಸುಮಾರು ವರ್ಷ ವಿರೋಧ ಪಕ್ಷದಲ್ಲೇ ಉತ್ತಮ ಕೆಲಸಮಾಡಿ ಜನಮನ್ನಣೆ ಪಡೆದವರು, ಅಲ್ಲಿ ಯಡಿಯೂರಪ್ಪನವರ ಕೆಲಸಕ್ಕಿಂತ ಕರ್ನಾಟಕದ ಜನತೆಗೆ ಒಂದೇ ಪಕ್ಷ ಅಥವಾ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ದಿಯ ಮಂತ್ರವನ್ನಷ್ಟೆ ಜಪಿಸಿ, ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡದೇ ಇದ್ದದ್ದು, ಮತ್ತು ಬಿಜೆಪಿಯ ಮೇಲೆ ಹುಟ್ಟಿದ ಅನುಕಂಪ ೨೦೦೭-೨೦೦೮ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ದೊರೆತ ಮೊದಲ ಸಲದ ಆಡಳಿತ ಅವಕಾಶದಲ್ಲಿ ಮೊದಲು ನೂರಷ್ಟು ಗೊಂದಲಗಳು, ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪನ ಪಟಾಲಂಗಳು ತಮ್ಮ ತಮ್ಮ ನಾಯಕರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಶ್ರಮವನ್ನು ನಡೆಸಿದರು. ಬಿಜೆಪಿ ಹ್ಯೆಕಮಾಂಡಿನ ಕೃಪಾಕಟಾಕ್ಷದಿಂದ ಯಡಿಯೂರಪ್ಪನವರಿಗೆ ಆ ಪದವಿ ಒಲಿದದ್ದು ಈಗ ಇತಿಹಾಸ.
ಜನರ ಬೆಂಬಲ, ಮತ್ತು ಹೊಸದನ್ನು ನಿರೀಕ್ಷಿಸುತ್ತಿದ್ದ ಕರ್ನಾಟಕಕ್ಕೆ ಯಡಿಯೂರಪ್ಪನವರ ಮೇಲೆ ಅಪರಿಮಿತ ವಿಶ್ವಾಸ ಮತ್ತು ಅನುಕಂಪದ ಬೆಂಬಲವಿತ್ತು. ಜನ ಯಡಿಯೂರಪ್ಪ ಮುಖ್ಯಮಂತ್ರಿಯವರೆಂದು ಘೋಷಿಸಿದ ಮೇಲೆ ಜನರ ನಂಬಿಕೆಯೂ ಹೆಚ್ಚಿತ್ತು. ಆದರೆ ಆದದ್ದೇನು ? ಬಿಜೆಪಿಯ ಶಾಸಕರಲ್ಲೇ ಆದ ಒಳಜಗಳ, ತಮ್ಮತಮ್ಮಲ್ಲೇ ಒಬ್ಬೊಬ್ಬರ ಬಗ್ಗೆ ಕತ್ತಿ ಮಸೆಯುತ್ತಾ, ಪ್ರತಿ ಕ್ಷಣದಲ್ಲೂ ಸ್ವಹಿತಾಸಕ್ತಿಯ ಬಗ್ಗೆಯೇ ಯೋಚಿಸುತ, ರೆಡ್ಡಿ-ಯಡ್ಡಿ ಜಗಳವಂತಲೇ ಬಿಂಬಿಸುತ, ಖಾಸಗಿ ಟಿವಿ ಚಾನೆಲ್ಗಳಲ್ಲಿ ಭರಪೂರ ರಸದೌತಣವನ್ನೇ ಉಣಬಡಿಸಿ ಕಡೆಗೆ ಹ್ಯೆಕಮಾಂಡ್ ಮಧ್ಯಸ್ತಿಕೆಯಲ್ಲಿ ಆ ಕ್ಷಣದ ಸುಖಾಂತ್ಯವನ್ನು ಕಂಡಂತಾಗಿತ್ತು.

ಮುಂದೆ ಹೇಗೋ ? ಮಾಧ್ಯಮಗಳ, ಪರಿಣಿತರ ಅಭಿಪ್ರಾಯದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯಪಾಲರ ನಡುವಿನ ಸಂಘರ್ಷ, ಮಂತ್ರಿಮಂಡಲದಲ್ಲಿನ ಭಿನ್ನತೆ, ಜೊತೆಗೊಂದಿಷ್ಟು ಹುಂಬತನ ಇವೆಲ್ಲ ಕರ್ನಾಟಕದ ಜನತೆಗೆ ಬೇಕಿತ್ತೆ ? ಇಂತಹ ನಾಯಕ, ಎನ್ನುವ ಮಟ್ಟಿಗೆ ಜನ ಬೇಸತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಪವಾಡ ಸದೃಶ್ಯವಾಗಿ ಈ ಎಲ್ಲಾ ಆರೋಪಗಳಿಂದ ಪಾರಾಗುವ ಸಾಧ್ಯತೆಗಳು ಇಲ್ಲ. ಹಾಗಂತ ರಾಜೀನಾಮೆಯ ಯೋಚನೆಯೂ ಸದ್ಯಕ್ಕಿಲ್ಲ. ತಮ್ಮ ಮೇಲಿನ ಆರೋಪಗಳು ನಿರಾಧಾರವಷ್ಟೆ, ಎಂದು ಹೇಳುತಾ, ಕಾಂಗ್ರೆಸ್ಸ್ ಮತ್ತು ಜನತಾದಳದವರು ಮಾಡಿರಬಹುದಾದ ಹಗರಣಗಳನ್ನು ಹುಡುಕುತ ಕೂತಿದ್ದಾರೆ. ಈ ರಾಜಕೀಯ ದೊಂಬರಾಟದಲ್ಲಿ ಯಾರು ಯಾರಿಗಿಂತ ಹೆಚ್ಚು ಮತ್ತು ಕಡಿಮೆ ಎಂಬುದು ಜನತೆಗೂ ತಿಳಿಯುತ್ತಿಲ್ಲ.