ನೋಡ್ತಿರೋರು

ಬುಧವಾರ, ಫೆಬ್ರವರಿ 2, 2011

ಮುಖ್ಯಮಂತ್ರಿಯೂ ಮತ್ತು ನಲ್ವತ್ತು ಜನ.................


ಭಾಗ ೧
ಭಾರತದ ಇತಿಹಾಸದಲ್ಲೇ ಕಾಣದಷ್ಟು ಕರಾಳ ದಿನ ೨೨ನೇ ಜನವರಿ ೨೦೧೧, ಆಡಳಿತ ಪಕ್ಷವೇ ಬಂದ್ ಕರೆ ನೀಡಿದ್ದು, ದೇಶದಲ್ಲಿ ಇದೇ ಮೊದಲು, ಒಂದೊಮ್ಮೆ ತುರ್ತು ಪರಿಸ್ಥಿತಿ ಎದುರಿಸಿದ್ದ ಭಾರತ ಸರ್ಕಾರ, ಕೆಲವೇ ದಿನಗಳಲ್ಲೇ ತನ್ನ ಸರಿ ದಾರಿಯನ್ನು ಕಂಡುಕೊಂಡು ಮುಂದೆ ಇಂತಹ ಪರಿಸ್ಥಿತಿ ಬಂದೊದಗದಂತೆ ನೋಡಿಕೊಳ್ಳುತ್ತಲೇ ಬಂದಿದೆ. ಇಂತಹ ಭವ್ಯ ಭಾರತದ ಸುದೀರ್ಘ ೬೦ ವರ್ಷಗಳ ಇತಿಹಾಸದಲ್ಲಿ ಇಂದು ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಬಂದ್ ಆಗುವುದಕ್ಕೆ ಕಾರಣವಾದರೂ ಏನು ? ಒಬ್ಬ ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಹೊತ್ತ ವ್ಯಕ್ತಿಗೆ ಮತ್ತೊಬ್ಬ ಮಹೋನ್ನತ ಜವಾಬ್ದಾರಿ ಹೊತ್ತ ವ್ಯಕ್ತಿಯು ರಾಜ್ಯಕ್ಕೆ ಮಾಡಿದ ಮೋಸವನ್ನು ಸಾಬೀತುಪಡಿಸಲು ಅವಕಾಶ ನೀಡಿದ್ದು, ಅದು ತಪ್ಪೇ ? ಹಾಗಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ ತಪ್ಪೇ ಮಾಡಲಾರನೇ ? ಕೇವಲ ಜನ ಸಾಮಾನ್ಯರು ಮಾತ್ರ ತಪ್ಪು ಮಾಡುವರೇ ? ಅವರಿಗೆ ಮಾತ್ರ ಶಿಕ್ಷೆಯೇ ?

ಆದದ್ದೇನು ………?

ಕರ್ನಾಟಕದ ಇಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಅಖಂಡ ರಾಜಕೀಯ ಇತಿಹಾಸದಲ್ಲಿ ಸುಮಾರು ವರ್ಷ ವಿರೋಧ ಪಕ್ಷದಲ್ಲೇ ಉತ್ತಮ ಕೆಲಸಮಾಡಿ ಜನಮನ್ನಣೆ ಪಡೆದವರು, ಅಲ್ಲಿ ಯಡಿಯೂರಪ್ಪನವರ ಕೆಲಸಕ್ಕಿಂತ ಕರ್ನಾಟಕದ ಜನತೆಗೆ ಒಂದೇ ಪಕ್ಷ ಅಥವಾ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ದಿಯ ಮಂತ್ರವನ್ನಷ್ಟೆ ಜಪಿಸಿ, ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡದೇ ಇದ್ದದ್ದು, ಮತ್ತು ಬಿಜೆಪಿಯ ಮೇಲೆ ಹುಟ್ಟಿದ ಅನುಕಂಪ ೨೦೦೭-೨೦೦೮ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಜೆಪಿ ದೊರೆತ ಮೊದಲ ಸಲದ ಆಡಳಿತ ಅವಕಾಶದಲ್ಲಿ ಮೊದಲು ನೂರಷ್ಟು ಗೊಂದಲಗಳು, ಅನುಭವದ ಕೊರತೆ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪನ ಪಟಾಲಂಗಳು ತಮ್ಮ ತಮ್ಮ ನಾಯಕರಿಗೆ ಮುಖ್ಯಮಂತ್ರಿಯ ಪಟ್ಟವನ್ನು ಅಲಂಕರಿಸಲು ಸಾಕಷ್ಟು ಶ್ರಮವನ್ನು ನಡೆಸಿದರು. ಬಿಜೆಪಿ ಹ್ಯೆಕಮಾಂಡಿನ ಕೃಪಾಕಟಾಕ್ಷದಿಂದ ಯಡಿಯೂರಪ್ಪನವರಿಗೆ ಆ ಪದವಿ ಒಲಿದದ್ದು ಈಗ ಇತಿಹಾಸ.
ಜನರ ಬೆಂಬಲ, ಮತ್ತು ಹೊಸದನ್ನು ನಿರೀಕ್ಷಿಸುತ್ತಿದ್ದ ಕರ್ನಾಟಕಕ್ಕೆ ಯಡಿಯೂರಪ್ಪನವರ ಮೇಲೆ ಅಪರಿಮಿತ ವಿಶ್ವಾಸ ಮತ್ತು ಅನುಕಂಪದ ಬೆಂಬಲವಿತ್ತು. ಜನ ಯಡಿಯೂರಪ್ಪ ಮುಖ್ಯಮಂತ್ರಿಯವರೆಂದು ಘೋಷಿಸಿದ ಮೇಲೆ ಜನರ ನಂಬಿಕೆಯೂ ಹೆಚ್ಚಿತ್ತು. ಆದರೆ ಆದದ್ದೇನು ? ಬಿಜೆಪಿಯ ಶಾಸಕರಲ್ಲೇ ಆದ ಒಳಜಗಳ, ತಮ್ಮತಮ್ಮಲ್ಲೇ ಒಬ್ಬೊಬ್ಬರ ಬಗ್ಗೆ ಕತ್ತಿ ಮಸೆಯುತ್ತಾ, ಪ್ರತಿ ಕ್ಷಣದಲ್ಲೂ ಸ್ವಹಿತಾಸಕ್ತಿಯ ಬಗ್ಗೆಯೇ ಯೋಚಿಸುತ, ರೆಡ್ಡಿ-ಯಡ್ಡಿ ಜಗಳವಂತಲೇ ಬಿಂಬಿಸುತ, ಖಾಸಗಿ ಟಿವಿ ಚಾನೆಲ್ಗಳಲ್ಲಿ ಭರಪೂರ ರಸದೌತಣವನ್ನೇ ಉಣಬಡಿಸಿ ಕಡೆಗೆ ಹ್ಯೆಕಮಾಂಡ್ ಮಧ್ಯಸ್ತಿಕೆಯಲ್ಲಿ ಆ ಕ್ಷಣದ ಸುಖಾಂತ್ಯವನ್ನು ಕಂಡಂತಾಗಿತ್ತು.
ಅಲ್ಲಿಯವರೆಗೂ ಬಿಜೆಪಿಯ ಪ್ರತಿ ಸಚಿವರು ನಾವು ಒಗ್ಗಟ್ಟಾಗಿದ್ದೇವೆ. ಎಂತಲೇ ಪ್ರಚಾರಪಡಿಸುವಲ್ಲೇ ಹ್ಯೆರಾಣಾಗಿದ್ದರು. ಹಾಗೂ ಹೀಗೂ ಕುಂಟು ಕುದುರೆ ನಡೆಯುತ್ತಿತ್ತು. ಮತ್ತೊಂದು ಒಂಬತ್ತು ತಿಂಗಳಷ್ಟೆ, ರೇಣುಕಾಚಾರ್ಯ ಹಿಂಬಾಗಿಲಿಂದ ಸಚಿವರಾಗಿದ್ದರೂ, ಮತ್ತೇನೋ ಮರೆತಂತೆ ಕೆಲವು ಸಚಿವರ ಒಟ್ಟುಗೂಡಿಸಿ, ಯಡಿಯೂರಪ್ಪನವರು ನನ್ನ ತಂದೆ ಸಮಾನ ಎನ್ನುತ್ತಲೇ ಕೇರಳ, ಗೋವಾ, ಚೆನ್ನ್ಯೆ ರೆಸಾರ್ಟುಗಳಲ್ಲಿ ವಾಸ್ತವ್ಯ ಹೂಡುತ್ತಾ ಇಡೀ ಸರ್ಕಾರವೇ ಬೀಳುಸುವ ಯತ್ನದಲ್ಲಿ ಫಲಪ್ರದವಾಗುವಂತೆ ಕಂಡು ಬಂದರೂ ಕಡೆಯ ಘಳಿಗೆಯಲ್ಲಿ ತನ್ನ ಬೆಂಬಲಿಗ ಸಚಿವರಿಗೆ ಮುಂದೆ ಹೋಗುವಂತೆ ಪ್ರೋತ್ಸಾಹಿಸಿ ಹಿಂದುಳಿದದ್ದು ಸಮಾನ ಮನಸ್ಕ ಸಚಿವರಿಗಂತೂ ಭಾರಿ ಭ್ರಮರನಿರಸವಾಯಿತು. ಮತ್ತೆ ಯಡಿಯೂರಪ್ಪನವ ಬೆಂಬಲಕ್ಕೆ ನಿಂತದ್ದು, ಸಮಾನ ಮನಸ್ಕ ಸಚಿವರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಅದುವರೆಗೂ ಎಲ್ಲವೂ ಸರಿಯಿದೆ ಎಂಬ ಭಾವನೆಯಿಂದಲೇ, ತನ್ನ ಸ್ವಹಿತಾಸಕ್ತಿಯ ಬಗ್ಗೆ ಯೋಚಿಸಿ ನಾಗರಬಾವಿಯ ಜಮೀನೊಂದನ್ನು ಡಿನೋಟಿಫ್ಯೆ ಮಾಡಿದ್ದೇ ಬಂತು, ವಿರೋಧ ಪಕ್ಷಗಳು ಅದಕ್ಕಾಗಿಯೇ ಕಾಯುತ್ತಿರುವಂತೆ, ಒಕ್ಕಲೊರಗಿನಲ್ಲಿ ರಾಜೀನಾಮೆ ನೀಡಬೇಕು, ಇಲ್ಲದಿದ್ದಿರೆ ನಾವು ಹೋರಾಟವನ್ನು ಬಿಡೆವು, ಎಂದು ರಾಜ್ಯಪಾಲರ ಬಳಿ ಮನವಿಯನ್ನು ಮೇಲಿಂದ ಮೇಲೆ ನೀಡುತ್ತಾ, ಮುಖ್ಯಮಂತ್ರಿಯ ಅಷ್ಟು ಬೇನಾಮಿ ಆಸ್ತಿ ವಿವರ, ನಕಲಿ ಕಂಪೆನಿಯ ಹೆಸರಿನಲ್ಲಿ ಮಾಡಿಕೊಂಡ ಸ್ಯೆಟುಗಳು, ಮಗ ವಿಜಯೆಂದ್ರ, ಮತ್ತೊಬ್ಬ ಸಂಸದ ಮಗ ರಾಘವೇಂದ್ರ, ಹಾಗೂ ಯಡಿಯೂರಪ್ಪನ ಅಳಿಯ ಅವರ ಬಂಧು ಬಾಂಧವರ ಅಷ್ಟು ಚರ-ಸ್ಥಿರ ಆಸ್ತಿಗಳ ಪಟ್ಟಿಯನ್ನೇ ವಕೀಲರ ಗುಂಪೊಂದು ರಾಜ್ಯಪಾಲರ ಮುಂದೆ ಈ ವಿವರಗಳನ್ನು ನೀಡಿ ಕ್ರಮ ಕ್ಯೆಗೊಳ್ಳಲೇಬೇಕು ಎಂಬ ಒತ್ತಾಯಿಸಿದರು, ಅಲ್ಲಿಯವರೆಗೂ ಅಳುತ್ತಾ, ಕರ್ನಾಟಕದ ಜನತೆಯಲ್ಲಿ ಕರುಣೆಯನ್ನು ಗಿಟ್ಟಿಸಿಕೊಂಡ ಮೆಚ್ಚಿನ ಮುಖ್ಯಮಂತ್ರಿ ಇಡೀ ಕರ್ನಾಟಕದ ಜನರ ಪಾಲಿಗೆ ಭಸ್ಮಾಸುರನಂತೆಯೇ ಕಂಡಿದ್ದು ಮಾತ್ರ ಶೋಚನೀಯ. ಕರ್ನಾಟಕದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಎಂದಿಗೂ ಮುಖ್ಯಮಂತ್ರಿಯ ಮೇಲೆ ನೇರ ಹೊಣೆಗೇಡಿತನದ ಆರೋಪ ಬಂದಿರಲಿಲ್ಲ. (ಬಹುಶಃ ಅಲ್ಲಿಯವರೆಗೂ ವಿಷಯವನ್ನು ಮುಂದುವರೆಸಲೂ ಬಿಡಲಿಲ್ಲವೇನೋ ?)

ಮುಂದೆ ಹೇಗೋ ? ಮಾಧ್ಯಮಗಳ, ಪರಿಣಿತರ ಅಭಿಪ್ರಾಯದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯಪಾಲರ ನಡುವಿನ ಸಂಘರ್ಷ, ಮಂತ್ರಿಮಂಡಲದಲ್ಲಿನ ಭಿನ್ನತೆ, ಜೊತೆಗೊಂದಿಷ್ಟು ಹುಂಬತನ ಇವೆಲ್ಲ ಕರ್ನಾಟಕದ ಜನತೆಗೆ ಬೇಕಿತ್ತೆ ? ಇಂತಹ ನಾಯಕ, ಎನ್ನುವ ಮಟ್ಟಿಗೆ ಜನ ಬೇಸತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಪವಾಡ ಸದೃಶ್ಯವಾಗಿ ಈ ಎಲ್ಲಾ ಆರೋಪಗಳಿಂದ ಪಾರಾಗುವ ಸಾಧ್ಯತೆಗಳು ಇಲ್ಲ. ಹಾಗಂತ ರಾಜೀನಾಮೆಯ ಯೋಚನೆಯೂ ಸದ್ಯಕ್ಕಿಲ್ಲ. ತಮ್ಮ ಮೇಲಿನ ಆರೋಪಗಳು ನಿರಾಧಾರವಷ್ಟೆ, ಎಂದು ಹೇಳುತಾ, ಕಾಂಗ್ರೆಸ್ಸ್ ಮತ್ತು ಜನತಾದಳದವರು ಮಾಡಿರಬಹುದಾದ ಹಗರಣಗಳನ್ನು ಹುಡುಕುತ ಕೂತಿದ್ದಾರೆ. ಈ ರಾಜಕೀಯ ದೊಂಬರಾಟದಲ್ಲಿ ಯಾರು ಯಾರಿಗಿಂತ ಹೆಚ್ಚು ಮತ್ತು ಕಡಿಮೆ ಎಂಬುದು ಜನತೆಗೂ ತಿಳಿಯುತ್ತಿಲ್ಲ.

ಬುಧವಾರ, ಜನವರಿ 26, 2011

ಮಂಗಳವಾರ, ಜನವರಿ 11, 2011

ಎಷ್ಟೊತ್ತು ನಿನ್ನ ಅಲಂಕಾರ ?



ಮೊನ್ನೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ನಾನು ನನ್ನ ಹೆಂಡತಿ ಹೋಗುವ ತಯಾರಿ ನಡೆಯುತ್ತಿತ್ತು. ಸಂಜೆ ನಾಲ್ಕಕ್ಕೆ ಹೊರಡುವ ನನ್ನ ತರಾತುರಿಗೂ ಅವಳ ಅಲಂಕಾರ ಪರಾಕಾಷ್ಟೆಗೂ ಸಮಯ ಐದುವರೆಯಾಗಿತ್ತು. ಅಂತು ಹೊರಡುವ ಭಾಗ್ಯ ಜೊತೆಗೆ ದೊಡ್ಡ ಗಣಪನಿಗೆ ನಮ್ಮ ದರ್ಶನದ ಭಾಗ್ಯ ನೆನೆದು ಕಿರುನಗೆ ಬೀರುತ್ತಾ, ಬೆಂಗಳೂರಿಗೆ ಹೊಸಬಳಾದ ನನ್ನಾಕೆ ರಸ್ತೆಯಲ್ಲಿ ಸಿಗುವ ಅಷ್ಟು ಕಟ್ಟಡಗಳು, ಪಾರ್ಕುಗಳು, ಸಿನಿಮಾ ಥಿಯೇಟರ್ಗಳು, ಅಂಗಡಿ, ಶಾಪಿಂಗ್ ಮಾಲ್ ಎಲ್ಲವನ್ನು ಕುತೂಹಲದಿಂದ ನೋಡುತ್ತಾ, ಪ್ರತಿಯೊಂದಕ್ಕೂ ವಿವರಣೆ ಕೇಳುತ್ತಾ, ಮತ್ತದನ್ನು ತನ್ನ ಊರುಗಳಿಗೆ ಹೊಲಿಸುತಾ ಸಾಗಿತು, ಸಂಜೆ ಆರಕ್ಕೆ ತಲುಪಿದ್ದಾಯಿತು. 

ಅವಳ ಮನಸ್ಸಿನಲ್ಲಿ ಬೆಂಗಳೂರು ಏನು ಅಲ್ಲ, ನ್ಯೆಸರ್ಗಿಕ ಸೌಂದರ್ಯವಿಲ್ಲ, ಅಲ್ಲೆಲ್ಲೂ ಬೆಟ್ಟ ಗುಡ್ಡವಿಲ್ಲ, ನದಿ ತೊರೆಗಳಿಲ್ಲ, ನೇಗಿಲಿಲ್ಲ, ಉಳುವ ಯೋಗಿಯಿಲ್ಲ, ಹಸಿರು ಉಹೂ ಅದ ವಾಸನೆಯೇ ಇಲ್ಲ, ಪ್ರಾಣಿ ಪಕ್ಷಿಗಳಿಲ್ಲ, ಇದ್ದದ್ದು ಒಂದಷ್ಟು ಕಾಗೆಗಳಷ್ಟೇ, ಅದು ಎಲ್ಲೋ ದೂರಕ್ಕೆ ಅಕಸ್ಮಾತಾಗಿ ಬೆಳಯಲು ಬಿಟ್ಟಿದ್ದ ಮರಗಳಲ್ಲಿ, ಆಕಾಶದಲ್ಲಿ, ಮತ್ತೆಲ್ಲೋ ಹೊಟ್ಟೆಹೊರೆಯುವ ಕಾಯಕದಲ್ಲಿ, ಮಲ್ಲೇಶ್ವರಂ ದಾಟಿ ಆನಂದ್ ರಾವ್ ಸರ್ಕಲ್ಲಿಗೆ ಬರುವಾಗ ಇವಳನ್ನು  ಫ್ಲ್ಯೆಓವರ್ ಮೇಲೆ ಕರೆದುಕೊಂಡು ಹೋಗುವ ಮನಸ್ಸಾಗಿ ಕೃಷ್ಣ ಪ್ಲೋರ್ ಮಿಲ್ ಕಡೆಗೆ ಗಾಡಿ ತಿರುಗಿಸಿದ್ದಾಯಿತು, ನೋಡೇ ಈಗ ಪ್ಹ್ಲ್ಯೇಓವರ್ ಬರುತ್ತೆ ಅದು ಮುಗಿಯುವ ವೇಳೆಗೆ ಪಕ್ಕದಲ್ಲೇ ರೇಸ್ ಕೋರ್ಸ್ ಸಿಗುತ್ತೆ ಅಂದೇ, ಯಾಕೋ ಏನು ಮಾತಾಡಲಿಲ್ಲ, ನನ್ನ ಹೆಮ್ಮೆಯ ಬೆಂಗಳೂರು ನೋಡ್ತಿದ್ದಾಳೆ ಅನಿಸಿ, ಸುಮ್ಮನೆ ಗಾಡಿ ಚಲಾಯಿಸುತ್ತಿದ್ದೆ, ಪ್ಹ್ಲ್ಯೇ ಓವರ್ ಇಳಿಯುವಾಗ ಕಾಣುವ ರೇಸ್ ಕೋರ್ಸ್ ತೋರಿಸಲು ಗಾಡಿ ಬಾಡಿಗೆ ಹಾಕಿ ನಿಲ್ಲಿಸಿದೆ, ಇದೆ ಕಣೆ ರೇಸ್ ಕೋರ್ಸ್ ಅಂದೇ, ಥೂ!!! ಇದೆನಾ ನಿಮ್ಮ ಬೆಂಗಳೂರು ಒಂದು ಗಿಡ ಮರ ಇಲ್ವೆಲ್ಲಲ್ರಿ, ಬರ ಬಂದ ಬಯಲುಸೀಮೆಯಾಗಿದೆ ನಿಮ್ಮೂರು, :-) ನಾನು ಅವಳಿಗೆ ರೇಸ್ ಕೋರ್ಸ್ ಬಗ್ಗೆ ಹೇಳೋಕೆ ಹೊರಟೆ, ಸುಮ್ನಿರಿ ಸಾಕು ಕೆಲಸಕ್ಕೆ ಬರದ ಕುದುರೆ ಜೂಜಿಗೆ ಇಷ್ಟು ಜಾಗವಿದೆ, ಒಂದಷ್ಟು ಕೆರೆ ಹೊಲ ಇರೋಕೆ ಜಾಗ ಇಲ್ಲ ಅಂದದ್ದಾಯಿತು, 

ಥಟ್ಟನೆ ನೆನಪಾದವನಂತೆ ಯಾಕಿಲ್ಲ ಕೆರೆ ಇದೆ ಸ್ಯಾಂಕಿ, ಹಲಸೂರು, ಯಡಿಯೂರು, ನಾಗವಾರ, ಹೆಬ್ಬಾಳ, ಬೆಳ್ಳಂದೂರು, ಚಿಕ್ಕಜಾಲ, ಅಂತ ಒಂದೇ ಉಸಿರಿಗೆ ಹೇಳಿ ಬೆಂಗಳೂರಿನ ಮಾನವನ್ನು ಸ್ವಲ್ಪವಾದರೂ ಉಳಿಸುವ ಧ್ಯೆರ್ಯ ಮಾಡಿದೆ. ಹೌದಾ!! ಹಾಗಾದರೆ ಅಲ್ಲೆಲ್ಲ ನೀರು ಚೆನ್ನಾಗಿದ್ಯ ? ಮತ್ತೊಂದು ಪ್ರಶ್ನೆ. ಕುಡಿಯೋಹಂಗೆ ಇಲ್ಲವಾದರು ಬೋಟಿಂಗ್ ಹೋಗೋಕೆ ಅಡ್ಡಿಯಿಲ್ಲ, ಬಡಕೊಬೇಕು ನಿಮ್ಮಗಳ ಶೋಕಿಗೆ, ಕೆರೆನೀರು ಕುಡಿಯೋಹಂಗೆ ಇಲ್ಲದಿದ್ರೆ ದನ ಕರುಗಳೆಲ್ಲ ನೀರು ಕುಡಿಯೋಕೆ ಎಲ್ಲಿ ಹೋಗ್ತವೆ ? ಮತ್ತೊಂದು ಪ್ರಶ್ನೆ, ದನಕರುಗಳ ಇಲ್ಲಿ ಅವೆಲ್ಲ ಕಡಿಮೆ, ಇಲ್ವೇಯಿಲ್ಲ ಅನ್ಕೋ, ಈಗೆಲ್ಲ ನಮ್ಮ ಜನ ಪಾಕೆಟ್ ಹಾಲನ್ನೇ ಕುಡಿಯೋದು, ಮತ್ತೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಹಾಲುಗಳು ಸಪ್ಲ್ಯೇ ಆಗ್ತವೆ, ಯಾವ್ದಾದ್ರು ಒಂದಾನಾ ಶೋಕಿ ಇಲ್ಲದಂಗೆ ನೀವುಗಳು ಬದುಕಿದ್ದಿರಾ, ಹೊಲ, ರೇಸ್ ಕೋರ್ಸು ಅಂತೀರಿ, ಕೆರೆ, ಬೋಟಿಂಗಿಗೆ  ಅಂತೀರಿ, ಹಾಲು, ಪಾಕೆಟ್ಟು ಅಂತೀರಿ, ಹಾಗಾದ್ರೆ ನೀವು ನಿಮ್ಮತನ ಅಂತ ಉಳಿಸಿಕೊಂದಿರೋದಾದರು ಏನು. ನಮ್ಮಲ್ಲಿ ನೋಡಿ ಪ್ರತಿ ಊರಿಗೂ ಒಂದು ದೇವರು ಮತ್ತೊಂದು ದ್ಯೆವ ಅನ್ತಿರುತ್ತೆ, ಪ್ರತಿ ಊರಿಗೊಂದು ಉತ್ಸವ ನಡಿಯುತ್ತೆ, ನಮ್ಮನೆ ಹಸು ಕೊಟ್ಟ ಹಾಳೆ ನಮಗೆ ಶ್ರೇಷ್ಠ, ನಾವು ದಿನವು ಹಸಿರು ನೋಡ್ತೇವೆ, ಕೆರೆ ನಮಗೆ ಬಟ್ಟೆ ಒಗಿಲಿಕ್ಕೆ, ದನಗಳ ನೀರಿಗೆ, ಇನ್ಯಾವುದೇ ವಿಷಯಕ್ಕೂ ಸರಿ, ಈ ಪಾಟಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿ ಯಾರನ್ನ ಬದುಕಿಸ್ತೀರ, ನಿಮಗೆ ಕಷ್ಟ ಅಂದ್ರೆ ಏನು ಗೊತ್ತು, ಬೆವರು ಬಂದಿದ್ದು ಯಾವತ್ತಾದ್ರು ನೆನಪಿದ್ಯಾ, ನಡೆದುಕೊಂಡು ಒಂದು ಮ್ಯೆಲಿ ದೂರನಾದ್ರು  ಹೋಗಿದ್ದುಂಟಾ, ಪ್ರಶ್ನೆಗಳ ಸುರಿಮಳೆಯೇ ನನ್ನ ಮೇಲೆ ಅದ್ಯಾಕೆ ನಾನು ಅಲಂಕಾರ ಇಷ್ಟೊತ್ತ ಅಂದನೋ ? 

ಇಲ್ಲ ಕಣೆ ಇಲ್ಲಿಯಾ ಹವೆಗೆ ಬೆವರೋದಿಲ್ಲ, ಇದು ಸಮುದ್ರ ಮಟ್ಟದಿಂದ ತುಂಬಾ ಎತ್ತರ ಪ್ರದೇಶದಲ್ಲಿದೇ, ಇಲ್ಲಿಯ ಹವೆನಾ ಎಲ್ಲರು ಇಷ್ಟಪಡ್ತಾರೆ, ಪಕ್ಕದಲ್ಲೇ ಫ್ಲ್ಯೆಓವರ್ ಕೆಲಸದ ಲಾರಿಯೊಂದು ಮಣ್ಣಿನ ಧೂಳು ಎಗರಿಸುತ್ತ ಭರ್ರನೆ ಹೋಯ್ತು. ಥೂ ಇದನ್ನ ಯಾವನ್ ಒಳ್ಳೆ ಹವೆ ಅಂತಾರೆ ಸುಮ್ನೆ ಬೆಂಗಳೂರು ಅಂತ ಕೊಚ್ಕೊಳ್ಬೇಡಿ, ನಿಮ್ಮದು ಅಂತ ಒಂದೆ ಅಭಿಮಾನದ ವಿಷಯ ಇದ್ಯಾ.

ಅಬ್ಬಾ ದೊಡ್ಡ ಗಣಪನ ಗುಡಿಗೆ ಬಂದಾಯ್ತು, ಬರುವ ಮುಂಚೆನೇ ಸಹಸ್ರನಾಮಾರ್ಚನೇನು ಆಗಿತ್ತಲ್ಲ. ಗಾಡಿ ನಿಲ್ಲಿಸಿ ಮೆಟ್ಟಿಲು ಹತ್ತುತ್ತಿದ್ವಿ, ಅಲ್ಲಿ ಅದ್ಯಾರೋ ಕೆಲವು ಹುಡುಗರು ಸಿಗರೆಟ್ ಸೇದೋಕೆ ಅಂತ ಕಡ್ಡಿಗೆ ಹುಡುಕಾಡ್ತಿದ್ರು ಅನ್ಸುತ್ತೆ, ಸಾರ್ !!! ಮ್ಯಾಚ್ ಬಾಕ್ಸ್ ಇದ್ಯಾ ಅಂತ ನನ್ನನ್ನೇ ಕೇಳಬೇಕೆ, ಇಲ್ಲ ಅಂದೇ, ಅಷ್ಟರಲ್ಲಾಗಲೇ ನನ್ನವಳ ಕಣ್ಣು ನನ್ನ ಸರ್ವಾಂಗ ಜೋಬುಗಳ ಸ್ಕ್ಯಾನಿಂಗ್ ಯಂತ್ರವಾಗಿತ್ತು. ಯಾಕೆ ಹ್ಯಾಂಗ್ ನೋಡ್ತೀಯ, ಮ್ಯಾಚ್ ಬಾಕ್ಸ್ ಕೇಳಿದ್ದು ಅವರು ನನಗಲ್ಲ ನಡಿ, ಹೋಗೋಣ ಅಂತ ಹೇಳ್ತಾ ಗಣಪನ ಮುಂದೆ ನಿಂತಾಯ್ತು, ಅದೇನು ಭಕ್ತಿ ಬಂದಿತ್ತೋ ಒಂದೆರಡು ನಿಮಿಷದವರೆ ಅವಳು ಮೌನ, ನನಗೋ ಮನಸಲ್ಲೇ ಖುಷಿ ಅಬ್ಬಾ ಮಳೆ ಬಂದು ನಿಂತಗಾಯ್ತಲ್ಲ, ಬೆಂಗಳೂರು ಜನ್ಮ ಜಾಲಾಡಿದ್ದು ನಿಲ್ತಲ್ಲ ಅಂತ, ಪೂಜೆಗೆ ತಂದಿದ್ದ ಹಣ್ಣು ಕಾಯಿಗಳನ್ನು ಪುರೋಹಿತರಿಗೆ ಕೊಟ್ಟದ್ದಾಯಿತು, ಪುರೋಹಿತರು ಮಂತ್ರ ಹೇಳುತ್ತಾ ಜನ್ಮ ನಕ್ಷತ್ರ ಪ್ರವರ ಕೇಳಿದ್ರು, ಒಂದನ್ನು ಚಾಚು ತಪ್ಪದೆ ವರದಿ ಒಪ್ಪಿಸಿದ ನನ್ನ ಮಡದಿ ಪುರೋಹಿತರು ನೀಡಿದ ಕಾಯನ್ನು ನೋಡಿ ಏನ್ರಿ ಇದು ನಾವು ಕೊಟ್ಟದ್ದು ಒಂದು ಕಾಯಿ ಅವರು ಅರ್ಧ ಕೊಟ್ಟಿದ್ದಾರೆ ಅಂದದ್ದೇ, ನಾನು ಇನ್ನೆಲ್ಲಿಯ ಗ್ರಹಚಾರ ಅಂತ ತಿಳಿದು, ಇಲ್ವೆ ಇಲ್ಲೆಲ್ಲಾ ಅರ್ಧ ಕಾಯಿ ಕೊಡೋದು ಅಂದು ಆ ಕಡೆ ತಿರುಗಿ ಬಾಳೆಸಿಪ್ಪೆ ಬಿಸಾಕಿದೆ, ಇದೆಂಥ ಪೂಜೇರಿ, ಆ ಹುಡುಗ ಇನ್ನು ಎಳಸು ಅವನಿಗೆ ಮಂತ್ರಗಳ ಸ್ಪಷ್ಟ ಉಚ್ಚಾರವೇ ಇಲ್ಲ, ನಮ್ಮೂರಲ್ಲಿ ಗುರುಕುಲದಲ್ಲಿ ಕಲಿತ  ಏಳು ವರ್ಷದ ಮಗುವು ಸ್ಪಷ್ಟವಾಗಿ ಮಂತ್ರಗಳ ಉಚ್ಚಾರ ಮಾಡುತ್ತೆ, ದೇವರ ಪುಜೆನು ಇಲ್ಲ ಶೋಕಿಗಾಗಿ ಮಾಡ್ತಾರ ? ಹೇಳ್ರಿ. 

ನನಗೆ ಗೊತ್ತಿಲ್ವೆ ಮಹರಾಯ್ತಿ, ನಾನು ಯಾವ ಪೂಜೆ, ಮಂತ್ರವನ್ನು ಕಲಿತಿಲ್ಲ ಅಂದೆ, ನಿಮ್ಮತ್ರ ಹೇಳ್ತಿನಲ್ಲ ನಾನು ಹೋಗಿ, ಒಂದು ಸಂಧ್ಯಾವಂದನೆನು ಬರದವರಿಗೆ, ನೀವೆಲ್ಲ ಕಂಪ್ಯೂಟರ್ ಮುಂದೆ ಕುಳಿತು ಕುತ್ತೋಕೆ ಲಾಯಕ್ಕು, ನಿಮಗೆ ದಿನ ನಿತ್ಯದ ಬದುಕು ಹೇಗೆ ನೋಡ್ಬೇಕು, ಗೊತ್ತಿಲ್ಲ, ಬೆಳಿಗ್ಗೆಯಿಂದ ರಾತ್ರಿವರೆಗೆ ಲ್ಯಾಪ್ ಟಾಪ್ ಇಟ್ಕೊಂಡು ಕೂತುಬಿಟ್ರೆ, ಅಲ್ಲೊಂದಿಷ್ಟು ಬರೆದು ಓದಿ ಮಾಡಿ ಬಿಟ್ರೆ ಇನ್ನೇನು ಬೇಕೇ ಆಗಿಲ್ಲ, ಜೊತೆಗೆ ಈ ಮೊಬ್ಯೆಲ್ ಬೇರೆ, ಕೋತಿಗೆ ಬಾಳೆಹಣ್ಣು ಕೊಟ್ಟಂತೆ. ಮಹರಾಯ್ತಿ ನನ್ನ ಬಿತ್ತ್ಬಿದು ನಾನು ಅಲಂಕಾರ ಇಷ್ತೊತ್ತಾ ಅಂದದ್ದು ದೊಡ್ಡ ತಪ್ಪಾಯ್ತು ? :)