ನೋಡ್ತಿರೋರು

ಮಂಗಳವಾರ, ಜನವರಿ 11, 2011

ಎಷ್ಟೊತ್ತು ನಿನ್ನ ಅಲಂಕಾರ ?



ಮೊನ್ನೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ನಾನು ನನ್ನ ಹೆಂಡತಿ ಹೋಗುವ ತಯಾರಿ ನಡೆಯುತ್ತಿತ್ತು. ಸಂಜೆ ನಾಲ್ಕಕ್ಕೆ ಹೊರಡುವ ನನ್ನ ತರಾತುರಿಗೂ ಅವಳ ಅಲಂಕಾರ ಪರಾಕಾಷ್ಟೆಗೂ ಸಮಯ ಐದುವರೆಯಾಗಿತ್ತು. ಅಂತು ಹೊರಡುವ ಭಾಗ್ಯ ಜೊತೆಗೆ ದೊಡ್ಡ ಗಣಪನಿಗೆ ನಮ್ಮ ದರ್ಶನದ ಭಾಗ್ಯ ನೆನೆದು ಕಿರುನಗೆ ಬೀರುತ್ತಾ, ಬೆಂಗಳೂರಿಗೆ ಹೊಸಬಳಾದ ನನ್ನಾಕೆ ರಸ್ತೆಯಲ್ಲಿ ಸಿಗುವ ಅಷ್ಟು ಕಟ್ಟಡಗಳು, ಪಾರ್ಕುಗಳು, ಸಿನಿಮಾ ಥಿಯೇಟರ್ಗಳು, ಅಂಗಡಿ, ಶಾಪಿಂಗ್ ಮಾಲ್ ಎಲ್ಲವನ್ನು ಕುತೂಹಲದಿಂದ ನೋಡುತ್ತಾ, ಪ್ರತಿಯೊಂದಕ್ಕೂ ವಿವರಣೆ ಕೇಳುತ್ತಾ, ಮತ್ತದನ್ನು ತನ್ನ ಊರುಗಳಿಗೆ ಹೊಲಿಸುತಾ ಸಾಗಿತು, ಸಂಜೆ ಆರಕ್ಕೆ ತಲುಪಿದ್ದಾಯಿತು. 

ಅವಳ ಮನಸ್ಸಿನಲ್ಲಿ ಬೆಂಗಳೂರು ಏನು ಅಲ್ಲ, ನ್ಯೆಸರ್ಗಿಕ ಸೌಂದರ್ಯವಿಲ್ಲ, ಅಲ್ಲೆಲ್ಲೂ ಬೆಟ್ಟ ಗುಡ್ಡವಿಲ್ಲ, ನದಿ ತೊರೆಗಳಿಲ್ಲ, ನೇಗಿಲಿಲ್ಲ, ಉಳುವ ಯೋಗಿಯಿಲ್ಲ, ಹಸಿರು ಉಹೂ ಅದ ವಾಸನೆಯೇ ಇಲ್ಲ, ಪ್ರಾಣಿ ಪಕ್ಷಿಗಳಿಲ್ಲ, ಇದ್ದದ್ದು ಒಂದಷ್ಟು ಕಾಗೆಗಳಷ್ಟೇ, ಅದು ಎಲ್ಲೋ ದೂರಕ್ಕೆ ಅಕಸ್ಮಾತಾಗಿ ಬೆಳಯಲು ಬಿಟ್ಟಿದ್ದ ಮರಗಳಲ್ಲಿ, ಆಕಾಶದಲ್ಲಿ, ಮತ್ತೆಲ್ಲೋ ಹೊಟ್ಟೆಹೊರೆಯುವ ಕಾಯಕದಲ್ಲಿ, ಮಲ್ಲೇಶ್ವರಂ ದಾಟಿ ಆನಂದ್ ರಾವ್ ಸರ್ಕಲ್ಲಿಗೆ ಬರುವಾಗ ಇವಳನ್ನು  ಫ್ಲ್ಯೆಓವರ್ ಮೇಲೆ ಕರೆದುಕೊಂಡು ಹೋಗುವ ಮನಸ್ಸಾಗಿ ಕೃಷ್ಣ ಪ್ಲೋರ್ ಮಿಲ್ ಕಡೆಗೆ ಗಾಡಿ ತಿರುಗಿಸಿದ್ದಾಯಿತು, ನೋಡೇ ಈಗ ಪ್ಹ್ಲ್ಯೇಓವರ್ ಬರುತ್ತೆ ಅದು ಮುಗಿಯುವ ವೇಳೆಗೆ ಪಕ್ಕದಲ್ಲೇ ರೇಸ್ ಕೋರ್ಸ್ ಸಿಗುತ್ತೆ ಅಂದೇ, ಯಾಕೋ ಏನು ಮಾತಾಡಲಿಲ್ಲ, ನನ್ನ ಹೆಮ್ಮೆಯ ಬೆಂಗಳೂರು ನೋಡ್ತಿದ್ದಾಳೆ ಅನಿಸಿ, ಸುಮ್ಮನೆ ಗಾಡಿ ಚಲಾಯಿಸುತ್ತಿದ್ದೆ, ಪ್ಹ್ಲ್ಯೇ ಓವರ್ ಇಳಿಯುವಾಗ ಕಾಣುವ ರೇಸ್ ಕೋರ್ಸ್ ತೋರಿಸಲು ಗಾಡಿ ಬಾಡಿಗೆ ಹಾಕಿ ನಿಲ್ಲಿಸಿದೆ, ಇದೆ ಕಣೆ ರೇಸ್ ಕೋರ್ಸ್ ಅಂದೇ, ಥೂ!!! ಇದೆನಾ ನಿಮ್ಮ ಬೆಂಗಳೂರು ಒಂದು ಗಿಡ ಮರ ಇಲ್ವೆಲ್ಲಲ್ರಿ, ಬರ ಬಂದ ಬಯಲುಸೀಮೆಯಾಗಿದೆ ನಿಮ್ಮೂರು, :-) ನಾನು ಅವಳಿಗೆ ರೇಸ್ ಕೋರ್ಸ್ ಬಗ್ಗೆ ಹೇಳೋಕೆ ಹೊರಟೆ, ಸುಮ್ನಿರಿ ಸಾಕು ಕೆಲಸಕ್ಕೆ ಬರದ ಕುದುರೆ ಜೂಜಿಗೆ ಇಷ್ಟು ಜಾಗವಿದೆ, ಒಂದಷ್ಟು ಕೆರೆ ಹೊಲ ಇರೋಕೆ ಜಾಗ ಇಲ್ಲ ಅಂದದ್ದಾಯಿತು, 

ಥಟ್ಟನೆ ನೆನಪಾದವನಂತೆ ಯಾಕಿಲ್ಲ ಕೆರೆ ಇದೆ ಸ್ಯಾಂಕಿ, ಹಲಸೂರು, ಯಡಿಯೂರು, ನಾಗವಾರ, ಹೆಬ್ಬಾಳ, ಬೆಳ್ಳಂದೂರು, ಚಿಕ್ಕಜಾಲ, ಅಂತ ಒಂದೇ ಉಸಿರಿಗೆ ಹೇಳಿ ಬೆಂಗಳೂರಿನ ಮಾನವನ್ನು ಸ್ವಲ್ಪವಾದರೂ ಉಳಿಸುವ ಧ್ಯೆರ್ಯ ಮಾಡಿದೆ. ಹೌದಾ!! ಹಾಗಾದರೆ ಅಲ್ಲೆಲ್ಲ ನೀರು ಚೆನ್ನಾಗಿದ್ಯ ? ಮತ್ತೊಂದು ಪ್ರಶ್ನೆ. ಕುಡಿಯೋಹಂಗೆ ಇಲ್ಲವಾದರು ಬೋಟಿಂಗ್ ಹೋಗೋಕೆ ಅಡ್ಡಿಯಿಲ್ಲ, ಬಡಕೊಬೇಕು ನಿಮ್ಮಗಳ ಶೋಕಿಗೆ, ಕೆರೆನೀರು ಕುಡಿಯೋಹಂಗೆ ಇಲ್ಲದಿದ್ರೆ ದನ ಕರುಗಳೆಲ್ಲ ನೀರು ಕುಡಿಯೋಕೆ ಎಲ್ಲಿ ಹೋಗ್ತವೆ ? ಮತ್ತೊಂದು ಪ್ರಶ್ನೆ, ದನಕರುಗಳ ಇಲ್ಲಿ ಅವೆಲ್ಲ ಕಡಿಮೆ, ಇಲ್ವೇಯಿಲ್ಲ ಅನ್ಕೋ, ಈಗೆಲ್ಲ ನಮ್ಮ ಜನ ಪಾಕೆಟ್ ಹಾಲನ್ನೇ ಕುಡಿಯೋದು, ಮತ್ತೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಹಾಲುಗಳು ಸಪ್ಲ್ಯೇ ಆಗ್ತವೆ, ಯಾವ್ದಾದ್ರು ಒಂದಾನಾ ಶೋಕಿ ಇಲ್ಲದಂಗೆ ನೀವುಗಳು ಬದುಕಿದ್ದಿರಾ, ಹೊಲ, ರೇಸ್ ಕೋರ್ಸು ಅಂತೀರಿ, ಕೆರೆ, ಬೋಟಿಂಗಿಗೆ  ಅಂತೀರಿ, ಹಾಲು, ಪಾಕೆಟ್ಟು ಅಂತೀರಿ, ಹಾಗಾದ್ರೆ ನೀವು ನಿಮ್ಮತನ ಅಂತ ಉಳಿಸಿಕೊಂದಿರೋದಾದರು ಏನು. ನಮ್ಮಲ್ಲಿ ನೋಡಿ ಪ್ರತಿ ಊರಿಗೂ ಒಂದು ದೇವರು ಮತ್ತೊಂದು ದ್ಯೆವ ಅನ್ತಿರುತ್ತೆ, ಪ್ರತಿ ಊರಿಗೊಂದು ಉತ್ಸವ ನಡಿಯುತ್ತೆ, ನಮ್ಮನೆ ಹಸು ಕೊಟ್ಟ ಹಾಳೆ ನಮಗೆ ಶ್ರೇಷ್ಠ, ನಾವು ದಿನವು ಹಸಿರು ನೋಡ್ತೇವೆ, ಕೆರೆ ನಮಗೆ ಬಟ್ಟೆ ಒಗಿಲಿಕ್ಕೆ, ದನಗಳ ನೀರಿಗೆ, ಇನ್ಯಾವುದೇ ವಿಷಯಕ್ಕೂ ಸರಿ, ಈ ಪಾಟಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿ ಯಾರನ್ನ ಬದುಕಿಸ್ತೀರ, ನಿಮಗೆ ಕಷ್ಟ ಅಂದ್ರೆ ಏನು ಗೊತ್ತು, ಬೆವರು ಬಂದಿದ್ದು ಯಾವತ್ತಾದ್ರು ನೆನಪಿದ್ಯಾ, ನಡೆದುಕೊಂಡು ಒಂದು ಮ್ಯೆಲಿ ದೂರನಾದ್ರು  ಹೋಗಿದ್ದುಂಟಾ, ಪ್ರಶ್ನೆಗಳ ಸುರಿಮಳೆಯೇ ನನ್ನ ಮೇಲೆ ಅದ್ಯಾಕೆ ನಾನು ಅಲಂಕಾರ ಇಷ್ಟೊತ್ತ ಅಂದನೋ ? 

ಇಲ್ಲ ಕಣೆ ಇಲ್ಲಿಯಾ ಹವೆಗೆ ಬೆವರೋದಿಲ್ಲ, ಇದು ಸಮುದ್ರ ಮಟ್ಟದಿಂದ ತುಂಬಾ ಎತ್ತರ ಪ್ರದೇಶದಲ್ಲಿದೇ, ಇಲ್ಲಿಯ ಹವೆನಾ ಎಲ್ಲರು ಇಷ್ಟಪಡ್ತಾರೆ, ಪಕ್ಕದಲ್ಲೇ ಫ್ಲ್ಯೆಓವರ್ ಕೆಲಸದ ಲಾರಿಯೊಂದು ಮಣ್ಣಿನ ಧೂಳು ಎಗರಿಸುತ್ತ ಭರ್ರನೆ ಹೋಯ್ತು. ಥೂ ಇದನ್ನ ಯಾವನ್ ಒಳ್ಳೆ ಹವೆ ಅಂತಾರೆ ಸುಮ್ನೆ ಬೆಂಗಳೂರು ಅಂತ ಕೊಚ್ಕೊಳ್ಬೇಡಿ, ನಿಮ್ಮದು ಅಂತ ಒಂದೆ ಅಭಿಮಾನದ ವಿಷಯ ಇದ್ಯಾ.

ಅಬ್ಬಾ ದೊಡ್ಡ ಗಣಪನ ಗುಡಿಗೆ ಬಂದಾಯ್ತು, ಬರುವ ಮುಂಚೆನೇ ಸಹಸ್ರನಾಮಾರ್ಚನೇನು ಆಗಿತ್ತಲ್ಲ. ಗಾಡಿ ನಿಲ್ಲಿಸಿ ಮೆಟ್ಟಿಲು ಹತ್ತುತ್ತಿದ್ವಿ, ಅಲ್ಲಿ ಅದ್ಯಾರೋ ಕೆಲವು ಹುಡುಗರು ಸಿಗರೆಟ್ ಸೇದೋಕೆ ಅಂತ ಕಡ್ಡಿಗೆ ಹುಡುಕಾಡ್ತಿದ್ರು ಅನ್ಸುತ್ತೆ, ಸಾರ್ !!! ಮ್ಯಾಚ್ ಬಾಕ್ಸ್ ಇದ್ಯಾ ಅಂತ ನನ್ನನ್ನೇ ಕೇಳಬೇಕೆ, ಇಲ್ಲ ಅಂದೇ, ಅಷ್ಟರಲ್ಲಾಗಲೇ ನನ್ನವಳ ಕಣ್ಣು ನನ್ನ ಸರ್ವಾಂಗ ಜೋಬುಗಳ ಸ್ಕ್ಯಾನಿಂಗ್ ಯಂತ್ರವಾಗಿತ್ತು. ಯಾಕೆ ಹ್ಯಾಂಗ್ ನೋಡ್ತೀಯ, ಮ್ಯಾಚ್ ಬಾಕ್ಸ್ ಕೇಳಿದ್ದು ಅವರು ನನಗಲ್ಲ ನಡಿ, ಹೋಗೋಣ ಅಂತ ಹೇಳ್ತಾ ಗಣಪನ ಮುಂದೆ ನಿಂತಾಯ್ತು, ಅದೇನು ಭಕ್ತಿ ಬಂದಿತ್ತೋ ಒಂದೆರಡು ನಿಮಿಷದವರೆ ಅವಳು ಮೌನ, ನನಗೋ ಮನಸಲ್ಲೇ ಖುಷಿ ಅಬ್ಬಾ ಮಳೆ ಬಂದು ನಿಂತಗಾಯ್ತಲ್ಲ, ಬೆಂಗಳೂರು ಜನ್ಮ ಜಾಲಾಡಿದ್ದು ನಿಲ್ತಲ್ಲ ಅಂತ, ಪೂಜೆಗೆ ತಂದಿದ್ದ ಹಣ್ಣು ಕಾಯಿಗಳನ್ನು ಪುರೋಹಿತರಿಗೆ ಕೊಟ್ಟದ್ದಾಯಿತು, ಪುರೋಹಿತರು ಮಂತ್ರ ಹೇಳುತ್ತಾ ಜನ್ಮ ನಕ್ಷತ್ರ ಪ್ರವರ ಕೇಳಿದ್ರು, ಒಂದನ್ನು ಚಾಚು ತಪ್ಪದೆ ವರದಿ ಒಪ್ಪಿಸಿದ ನನ್ನ ಮಡದಿ ಪುರೋಹಿತರು ನೀಡಿದ ಕಾಯನ್ನು ನೋಡಿ ಏನ್ರಿ ಇದು ನಾವು ಕೊಟ್ಟದ್ದು ಒಂದು ಕಾಯಿ ಅವರು ಅರ್ಧ ಕೊಟ್ಟಿದ್ದಾರೆ ಅಂದದ್ದೇ, ನಾನು ಇನ್ನೆಲ್ಲಿಯ ಗ್ರಹಚಾರ ಅಂತ ತಿಳಿದು, ಇಲ್ವೆ ಇಲ್ಲೆಲ್ಲಾ ಅರ್ಧ ಕಾಯಿ ಕೊಡೋದು ಅಂದು ಆ ಕಡೆ ತಿರುಗಿ ಬಾಳೆಸಿಪ್ಪೆ ಬಿಸಾಕಿದೆ, ಇದೆಂಥ ಪೂಜೇರಿ, ಆ ಹುಡುಗ ಇನ್ನು ಎಳಸು ಅವನಿಗೆ ಮಂತ್ರಗಳ ಸ್ಪಷ್ಟ ಉಚ್ಚಾರವೇ ಇಲ್ಲ, ನಮ್ಮೂರಲ್ಲಿ ಗುರುಕುಲದಲ್ಲಿ ಕಲಿತ  ಏಳು ವರ್ಷದ ಮಗುವು ಸ್ಪಷ್ಟವಾಗಿ ಮಂತ್ರಗಳ ಉಚ್ಚಾರ ಮಾಡುತ್ತೆ, ದೇವರ ಪುಜೆನು ಇಲ್ಲ ಶೋಕಿಗಾಗಿ ಮಾಡ್ತಾರ ? ಹೇಳ್ರಿ. 

ನನಗೆ ಗೊತ್ತಿಲ್ವೆ ಮಹರಾಯ್ತಿ, ನಾನು ಯಾವ ಪೂಜೆ, ಮಂತ್ರವನ್ನು ಕಲಿತಿಲ್ಲ ಅಂದೆ, ನಿಮ್ಮತ್ರ ಹೇಳ್ತಿನಲ್ಲ ನಾನು ಹೋಗಿ, ಒಂದು ಸಂಧ್ಯಾವಂದನೆನು ಬರದವರಿಗೆ, ನೀವೆಲ್ಲ ಕಂಪ್ಯೂಟರ್ ಮುಂದೆ ಕುಳಿತು ಕುತ್ತೋಕೆ ಲಾಯಕ್ಕು, ನಿಮಗೆ ದಿನ ನಿತ್ಯದ ಬದುಕು ಹೇಗೆ ನೋಡ್ಬೇಕು, ಗೊತ್ತಿಲ್ಲ, ಬೆಳಿಗ್ಗೆಯಿಂದ ರಾತ್ರಿವರೆಗೆ ಲ್ಯಾಪ್ ಟಾಪ್ ಇಟ್ಕೊಂಡು ಕೂತುಬಿಟ್ರೆ, ಅಲ್ಲೊಂದಿಷ್ಟು ಬರೆದು ಓದಿ ಮಾಡಿ ಬಿಟ್ರೆ ಇನ್ನೇನು ಬೇಕೇ ಆಗಿಲ್ಲ, ಜೊತೆಗೆ ಈ ಮೊಬ್ಯೆಲ್ ಬೇರೆ, ಕೋತಿಗೆ ಬಾಳೆಹಣ್ಣು ಕೊಟ್ಟಂತೆ. ಮಹರಾಯ್ತಿ ನನ್ನ ಬಿತ್ತ್ಬಿದು ನಾನು ಅಲಂಕಾರ ಇಷ್ತೊತ್ತಾ ಅಂದದ್ದು ದೊಡ್ಡ ತಪ್ಪಾಯ್ತು ? :)

3 ಕಾಮೆಂಟ್‌ಗಳು:

Sahana Rao ಹೇಳಿದರು...

ಈ ಬರಹದಲ್ಲಿ ತಿಳಿ ಹಾಸ್ಯ ಬಹಳ ಚನ್ನಾಗಿದೆ..

ಕುತೂಹಲಕ್ಕಾಗಿ ನಿಮ್ಮ ಅಪ್ಪಣೆ ಇದ್ದಾರೆ ಒಂದು ಪ್ರಶ್ನೆ.. ನಿಮ್ಮ ಬಾಲ ಸಂಗಾತಿಯ ಸ್ವಸ್ಥಾನ ಯಾವುದು?

ಅವರು ಹೇಳಿದ್ದು ನಿಜ.. ಮನುಷ್ಯರ ಬಗ್ಗೆಯೇ ಕಾಳಜಿ ಇಲ್ಲ ಜನಕ್ಕೆ.. ಪ್ರಾಣಿಗಳ ಬಗ್ಗೆ ಅದರ ದಾಹ, ಆಕಳಿನ ಬಗ್ಗೆ ಯೋಚಿಸಲು ಸಮಯವಿದೆಯ?

ಎಷ್ಟು ಹಕ್ಕಿ ನಿಮ್ಮೂರು ಬೇಡ ಅಂತ ನಮ್ಮನ್ನು ತ್ಯಜಿಸಿ ಹೋಗಿದ್ದೀಯೋ.. ಎಷ್ಟು ಪ್ರಾಣಿಗಳು ನಮ್ಮನ್ನ ನೀವೇ ಬುದುಕಿ Concrete ಕಾಡಿನಲ್ಲಿ ಅಂತ ಶಪಿಸಿ ಹೋಗಿವೆಯೋ..


ನಾವು ಎಲ್ಲ ನೋಡುತ್ತಿದ್ದರು, ಏನು ಮಾಡಲೂ ಆಗದೆ, ಸಮಯವು ಇಲ್ಲ ಎನ್ನುವ ಹಾಗೆ ಬದುಕುತಿದ್ದೇವೆ..

-ಸಹನೆ

ಅರವಿಂದ್ ಹೇಳಿದರು...

ಸಹನೆ

ಆಕೆ ಉಡುಪಿಯವಳು :-)

ಅರವಿಂದ್

dinesh ಹೇಳಿದರು...

yen sir yestu chennagi barediddira. Thumba chennagide